
ಸಿಫಾ ಬಾಗವಾನ. …………………………………………………..

ಐಶ್ವರ್ಯ ಅಡಿಹುಡಿ …………………………………..

ಲಕ್ಷ್ಮೀ ಗಸ್ತಿ …………………………………………………….

ದೀಪಾಲಿ ಮಾನೆ ……………………………………………………

ಸಾವಿತ್ರಿ ಕಂಕಣವಾಡಿ. ………………………………………………….
ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್‍ಎಸ್‍ಆರ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶೀಫಾ ಬಾಗವಾನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 99.52 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 4ನೇ ರ್ಯಾಂಕ್ ಹಾಗೂ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಐಶ್ವರ್ಯ ಅಡಿಹುಡಿ ಹಾಗೂ ಲಕ್ಷ್ಮೀ ಗಸ್ತಿ 625ಕ್ಕೆ 609 ಅಂಕಗಳನ್ನು ಪಡೆದುಕೊಂಡು ಶಾಲೆಗೆ ದ್ವಿತೀಯ, ದೀಪಾಲಿ ಮಾನೆ 608 ಅಂಕಗಳೊಂದಿಗೆ ತೃತೀಯ ಹಾಗೂ ಸಾವಿತ್ರಿ ಕಂಕಣವಾಡಿ 603 ಅಂಕಗಳೊಂದಿಗೆ ಚತುರ್ಥ ಸ್ಥಾನವನ್ನು ಪಡೆದುಕೊಂಡಿರುವರು.
34 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 92 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಎಸ್.ಆರ್. ಸೋನವಾಲಕರ ಹಾಗೂ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಸಿಬ್ಬಂದಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
IN MUDALGI Latest Kannada News