ಮೂಡಲಗಿ: ಬಿ.ಎಸ್.ಎನ್.ಎಲ್ ಟೆಲಿಫೋನ್ ಬೆಳಗಾವಿ ಜಿಲ್ಲಾ ಸಲಹೆಗಾರ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ ಬಿಜೆಪಿ ಕಾರ್ಯಕರ್ತ ಈರಪ್ಪ ಢವಳೇಶ್ವರ, ನೇಮಕಗೊಂಡಿದ್ದಾರೆ.
ಭಾರತ ದೂರಸಂಪರ್ಕ ಸಂಚಾರ ನಿಗಮದ ವಿಭಾಗ ಅಧಿಕಾರಿ ಎಸ್.ಕೆ.ಘೋಷ ಈ ಕುರಿತು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲಾ ದೂರಸಂಪರ್ಕ ನಿಗಮಕ್ಕೆ ಸಲಹೆಗಾರ ಸಮಿತಿಯ ಸದಸ್ಯರಾಗಿ 2024ರ ಜ. 13ರವರೆಗೆ ಇವರ ಅಧಿಕಾರ ಅವಧಿ ಇರಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೂಡಲಗಿ ಪಟ್ಟಣದ ಗಂಗಾನಗರ ನಿವಾಸಿ ಈರಪ್ಪ ಢವಳೇಶ್ವರವರು ಭಾರತ ದೂರಸಂಪರ್ಕ ಸಂಚಾರ ನಿಗಮದ ಬೆಳಗಾವಿ ಜಿಲ್ಲಾ ಸಲಹೆಗಾರ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದರಿಂದ ಪಟ್ಟಣದ ಯುವಕರು ಸತ್ಕರಿ ಗೌರವಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
