ಮೂಡಲಗಿ:2022-23 ನೇ ಸಾಲಿನ ಪ್ರಸಕ್ತ ಮುಂಗಾರು ಹಂಗಾಮಿಗೆ ಮೂಡಲಗಿ ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯಿಂದಾ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಜೂನ್ ಮೊದಲನೆ ವಾರದಲ್ಲಿ ಹದವಾದ ಮಳೆಯಾದ ಮೇಲೆ ಭೂಮಿಯಲ್ಲಿ ಸಾಕಷ್ಠು ತೇವಾಂಶ ಇರುವಾಗ ರೈತರು ಬಿತ್ತನೆ ಮಾಡುವಂತೆ ಅರಬಾಂವಿ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಲ. ಜಾರಕಿಹೊಳಿ ಆವರು ಮೂಡಲಗಿ ತಾಲೂಕಿನ ಎಲ್ಲಾ ರೈತರಲ್ಲಿ ಪತ್ರಿಕಾ ಪ್ರಕಟನೆ ಮೂಲಕ ಮನವಿ ಮಾಡಿಕೊಂಡಿದಾರೆ.
ಮೂಡಲಗಿ ತಾಲ್ಲೂಕಿನಲ್ಲಿ ಮೂಡಲಗಿ, ಅರಭಂವಿ, ಯಾದವಾಡ, ಕುಲಗೋಡ, ಲಕ್ಷ್ಮೇಶ್ವರ ಗ್ರಾಮಗಳಲ್ಲಿ ಕೃಷಿ ಇಲಾಖೆಯಿಂದಾ ಬೀಜ ವಿತರಣಾ ಕೇಂದ್ರಗಳಲ್ಲಿ ಸೋಯಾಬಿನ್, ಹೆಸರು, ಸಜ್ಜೆ,ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು. ಆಯಾ ಬೀಜ ವಿತರಣಾ ಕೇಂದ್ರಗಳಲ್ಲಿ ರೈತರು ತಮ್ಮ ಪಹಣಿ ಹಾಗೂ ಆಧಾರ ಕಾರ್ಡ್ ನೀಡಿ ಸಹಾಯಧನದಲ್ಲಿರುವ ಬೀಜಗಳನ್ನು ಪಡೆಯಲು ಅವರು ತಿಳಿಸಿರುತ್ತಾರೆ. ಮೂಡಲಗಿ ತಾಲ್ಲೂಕಿನ ಎಲ್ಲಾ ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ಕೃಷಿ ಇಲಾಖೆಯಿಂದಾ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸಲಾಗುವುದು ಎಂದು ಅವರು ತಿಳಿಸಿದರು.
ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎಂ.ಎಂ.ನದಾಫರವರು ಮಾತನಾಡಿ ಮೂಡಲಗಿ ತಾಲ್ಲೂಕಿನ ರೈತರಿಗೆ ಬೇಕಾಗುವ ಪ್ರಮಾಣದಲ್ಲಿ ಬಿತ್ತನೆ ಬೀಜಗಳಾದ ಸೋಯಾಬಿನ್, ಹೆಸರು, ಮೆಕ್ಕೆಜೋಳ,ತೊಗರಿ,ಸಜ್ಜೆ,ಸೂರ್ಯಕಾಂತಿ ದಾಸ್ತಾನು ಮಾಡಲಾಗಿದ್ದು. ರೈತರು ಆತಂಕಕ್ಕೆ ಒಳಗಾಗಬಾರದು. ಅಲ್ಲದೇ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಹಾಗೂ ಉಪ ಬೀಜ ಮಾರಾಟ ಕೇಂದ್ರಗಳಿಂದ ಪ್ರಮಾಣೀತ ಬೀಜಗಳನ್ನು ಪಡೆಯಲು ತಿಳಿಸಿದರು. ಪ್ರಸಕ್ತ ಮುಂಗಾರು ಹಂಗಾಮಿಗೆ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳಲ್ಲಿ ಒಟ್ಟು 109538(ಹೆ) ಪ್ರದೇಶ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದ್ದು ಗೋಕಾಕ ಹಾಗೂ ಮೂಡಲಗಿ ಯಾಲ್ಲೂಕುಗಳಲ್ಲಿ ಮೆಕ್ಕೆಜೋಳ, ಸೋಯಾಬಿನ್,ಹೆಸರು,ಸೂರ್ಯಕಾಂತಿ ಹಾಗೂ 60% ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದೆ ಎಂದು ಹೇಳಿದರು.
ರೈತರು ಮಾರಾಟ ಮಳಿಗೆಗಳಿಂದಾ ಬೀಜ ಖರೀದಿಸುವಾಗ ಕಡ್ಡಾಯವಾಗಿ ಅಧಿಕೃತ ರಶೀದಿ ಪಡೆಯಬೇಕು. ಅಲ್ಲದೇ ಅಧಿಕೃತವಾಗಿ ಕೃಷಿ ಇಲಾಖೆಯಿಂದಾ ಬೀಜ ಪರವಾನಗಿ ಪಡೆದ ಮಾರಾಟಗಾರರಿಂದ ಮಾತ್ರ ಬೀಜಗಳನ್ನು ಖರೀದಿಸಬೇಕು. ಮತ್ತು ಚೀಲದ ಮೇಲೆ ನಮೂದಿಸಿರುವಂತೆ ತೂಕ ಇದೆಯೇ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು ಮತ್ತು ಬಿತ್ತನೆ ಬೀಜದ ಉತ್ಪಾದಿಸಿದ ದಿನಾಂಕ ಪರಿಶೀಲಿಸಬೇಕು ಮತ್ತು ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸವನ್ನು ಪರಿಶೀಲಿಸಿ ರೈತರು ಗುಣಮಟ್ಟದ ಬೀಜಗಳನ್ನು ಖರೀದಿಸಲು ಅವರು ಸಲಹೆ ನೀಡಿದರು.
ಗೋಕಾಕ ಮತ್ತು ಮೂಡಲಗಿ ತಾಲ್ಲೂಕಗಳಿಗೆ ಜೂನ್ ಮಾಹೆಗೆ ಒಟ್ಟು 4450 ಮೆ.ಟನ್ ಯೂರಿಯಾ ಬೇಡಿಕೆ ಇದ್ದು. ಪ್ರಸ್ತುತ2742 ಮೆ.ಟನ್ ರಸಗೊಬ್ಬರ ಪಿ.ಕೆ.ಪಿ.ಎಸ್ ಹಾಗೂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯವಿದ್ದು ಇನ್ನುಳಿದ ರಸಗೊಬ್ಬರವು ವಿವಧ ಕಂಪನಿಗಳಿಂದ ಸರಬರಾಜು ಆಗಲಿದೆ. ಮತ್ತು 930 ಮೆ.ಟನ್ ಡಿ.ಎ.ಪಿ ಬೇಡಿಕೆ ಇದ್ದು. 902 ಟನ್ ದಾಸ್ತಾನು ಇರುತ್ತದೆ, ರೈತರು ರಸಗೊಬ್ಬರ ಖರೀದಿ ಮಾಡುವಾಗ ಅಧಿಕೃತವಾಗಿ ಕೃಷಿ ಇಲಾಖೆಯಿಂದಾ ಪರವಾನಗಿ ಪಡೆದ ಮಾರಾಟಗಾರರಿಂದ ಖರೀದಿಸಬೇಕು. ಚೀಲದ ಬಾಯಿ ಯಂತ್ರದಿಂದ ಹೊಲದಿರಬೇಕು ಹಾಗೂ ರಸಗೊಬ್ಬರ ಮಾರಾಟಗಾರರು ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆ ತೆಗೆದುಕೊಂಡಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಅಧಿಕಕಾರಿಗಳನ್ನು ಸಂಪರ್ಕ ಮಾಡಬೇಕು. ಈಗಾಗಲೇ ಗೋಕಾಕ ಹಾಗೂ ಮೂಲಡಗಿ ತಾಲ್ಲೂಕುಗಳ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಪರವಾನಗಿ ರದ್ದು ಪಡಿಸಲಾಗುವುದೆಂದು ಎಚ್ಚರಿಕೆ ನೀಡಿಲಾಗಿದೆ ಎಂದು ತಿಳಿಸಿದಾರೆ.