Breaking News
Home / Recent Posts / ನಾವು ಪ್ರತಿದಿನ ಉಸಿರಾಡಲು ಆಮ್ಲಜನಕ ಕೊಟ್ಟಿರುವ ಪ್ರಕೃತಿಗೆ ನಾವೇನಾದರೂ ಕೊಡುಗೆ ಕೊಡಲೇಬೇಕು- ಪಿಎಸ್‍ಐ ಎಚ್ ವೈ ಬಾಲದಂಡಿ

ನಾವು ಪ್ರತಿದಿನ ಉಸಿರಾಡಲು ಆಮ್ಲಜನಕ ಕೊಟ್ಟಿರುವ ಪ್ರಕೃತಿಗೆ ನಾವೇನಾದರೂ ಕೊಡುಗೆ ಕೊಡಲೇಬೇಕು- ಪಿಎಸ್‍ಐ ಎಚ್ ವೈ ಬಾಲದಂಡಿ

Spread the love

ಮೂಡಲಗಿ: ಪರಿಸರ ರಕ್ಷಿಸುವ ಜವಾಬ್ದಾರಿ ಮಾನವರದ್ದಾಗಿದೆ ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗದೆ ಪರಿಸರ ದಿನಾಚಾರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದು ಸ್ಥಳೀಯ ಪಿಎಸ್‍ಐ ಎಚ್ ವೈ ಬಾಲದಂಡಿ ಹೇಳಿದರು.

ರವಿವಾರದಂದು ಪಟ್ಟಣದ ಗಂಗಾನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಆವರಣದಲ್ಲಿ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು ನಿರ್ಮಿಸಿದ ಉದ್ಯಾವನದ ಸಸಿಗೆ ನೀರುಣಿಸಿ ಮಾತನಾಡಿದ ಅವರು, ಈರಪ್ಪ ಅವರು ಪರಿಸರ ಮೇಲೆ ಇಟ್ಟಿರುವ ಕಾಳಜಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮೂಡಿದಾಗ ಮಾತ್ರ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದರು.

ನಾವು ಪ್ರತಿದಿನ ಉಸಿರಾಡಲು ಆಮ್ಲಜನಕ ಕೊಟ್ಟಿರುವ ಪ್ರಕೃತಿಗೆ ನಾವೇನಾದರೂ ಕೊಡುಗೆ ಕೊಡಲೇಬೇಕು. ನಾವು ಪರಿಸರ ದಿನದಂದು ಮಾತ್ರ ಉಸಿರಾಡುವುದಿಲ್ಲ. ಪ್ರತೀ ದಿನ ನಮಗೆ ಆಮ್ಲಜನಕ ಪೂರೈಕೆ ಆಗಬೇಕು ಪ್ರಸ್ತುತ ಆಮ್ಲಜನಕದ ಮಹತ್ವ ನಮಗೆ ಅರಿವಾಗುವ ಕಾಲಬಂದಿದೆ. ಇಂದು ಆಮ್ಲಜನಕಕ್ಕಾಗಿ ಹಣ ನೀಡುತ್ತೇವೆ. ಆದರೆ ಪರಿಸರದಲ್ಲಿ ಅದೆಷ್ಟೋ ವರ್ಷಗಳಿಂದ ಬೇರೂರಿ ಉಚಿತ ಗಾಳಿ, ತಂಪು, ಹಣ್ಣು, ಹೂ ನೀಡುವ ಮರವನ್ನು ಕ್ಷಣಮಾತ್ರದಲ್ಲಿ ಧರೆಗುರುಳಿಸಿ ಬಿಡುತ್ತೇವೆ. ಇಂದು ನಮ್ಮ ಸ್ವಾರ್ಥಕ್ಕೆ ತಕ್ಕ ಪಾಠ ಪ್ರಕೃತಿಯೇ ಕಲಿಸುತ್ತಿದೆ ಎಂದರು.

ಹಿರಿಯ ಮುಖಂಡರಾದ ಪ್ರಕಾಶ ಮಾದರ, ರಮೇಶ ಸಣ್ಣಕ್ಕಿ ಮಾತನಾಡಿ, ಭೂಮಿಯು ನಮ್ಮ ಎಲ್ಲಾ ಜೀವಿಗಳ ಏಕೈಕ ಮನೆಯಾಗಿದ್ದು ಆದ್ದರಿಂದ ಭೂಮಿಯನ್ನು ರಕ್ಷಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಅರಣ್ಯ ನಾಶದಿಂದ ಪ್ರಾಣಿಗಳೆಲ್ಲ ನಗರದತ್ತ ಲಗ್ಗೆ ಇಡುತ್ತಿವೆ. ಹಿಂದೆ ಇದ್ದ ಅರಣ್ಯ, ಹೊಲ ಗದ್ದೆಗಳು ಇಂದು ಕಣ್ಮರೆಯಾಗಲು ಮೂಲಕ ಕಾರಣ ಅತಿಯಾದ ನಗರೀಕರಣ. ನಗರೀಕರಣದ ಜೊತೆಗೆ ಪ್ರಾಕೃತಿಕ ಸಂಪನ್ಮೂಲ ಉಳಿಸುವ ಜೊತೆಗೆ ಅಭಿವೃದ್ದಿಗೆ ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡಾರ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಶಾಬು ಸಣ್ಣಕ್ಕಿ, ಮಾಹಾದೇವ ಶೆಕ್ಕಿ, ಬಸವರಾಜ ಪಾಟೀಲ, ಎಲ್ ವಾಯ್ ಅಡಿಹುಡಿ, ಹಣಮಂತ ಸತ್ತರಡ್ಡಿ, ಕೇದಾರಿ ಭಸ್ಮೆ, ಎಬಿವಿಪಿ ತಾಲೂಕಾ ಸಂಚಾಲಕ ಮಹಾದೇವ ನವಣಿ, ವಸತಿ ನಿಲಯದ ಮೇಲ್ವಿಚಾರಕ ನಾಗಪ್ಪ ಕಾಪಶಿ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೋಟೋ ಕ್ಯಾಪ್ಷನ್> ಮೂಡಲಗಿ: ಪಟ್ಟಣದ ಗಂಗಾನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಆವರಣದಲ್ಲಿ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು ನಿರ್ಮಿಸಿದ ಉದ್ಯಾವನದ ಸಸಿಗೆ ನೀರುಣಿಸಿದ ಗಣ್ಯರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ