ಮೂಡಲಗಿ: ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕವಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಹಾಗೂ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು.
ಅವರು ಹಳ್ಳೂರ ಗ್ರಾಮದ ಡಿ ದೇವರಾಜ ಅರಸು ವಸತಿ ನಿಲಯದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಇವುಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮನ್ನು ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಹನಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಗೀಡಗಳನ್ನು ಮಕ್ಕಳಂತೆ ಪಾಲನೆ ಪೋಷನೆ ಮಾಡಿ ವರ್ಷ ಪೂರ್ತಿ ಬೇಳೆಸುವ ಸಂಕಲ್ಪ ಮಾಡಬೇಕು. ಹಸಿರೆ ಉಸೀರು ಎನ್ನುವ ನುಡಿಯಂತೆ ಸುಂದರ ಪರಿಸರಕ್ಕಾಗಿ ಮನೆಗೊಂದು ಮರ ಉರಿಗೊಂದು ವಣ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರಕ್ಷಿಸೋಣ ಎಂದು ನುಡಿದರು.
ಪುಣ್ಯಕೋಟಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಬಸವರಾಜ ಹೊಸಮನಿ ಮಾತನಾಡಿ ಯುವ ಬಳಗ ಸೇರಿಕೊಂಡು ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಅವರ ಮುಂದಾಳತ್ವದಲ್ಲಿ ಜಿಲ್ಲೆಯಾದ್ಯಂತ ಗಿಡ ನೆಡುವ ಕಾರ್ಯ ಪ್ರಾರಂಭವಾಗುತ್ತದೆ. ಆಕಸ್ಮಿಕವಾಗಿ ಒಂದು ಗಿಡ ಕಡಿದರೆ ಅದರ ಪರ್ಯಾಯವಾಗಿ ಹತ್ತು ಗಿಡಗಳ ನೆಡುವ ಕಾರ್ಯ ಆಗಬೆಕು ಎಂದು ನಮ್ಮ ಯುವ ಬಳಗದ ಆಶಯವಾಗಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಬಿಸಿಎಂ ಸಿಬ್ಬಂದಿ ವಿವೇಕ್ ಬನಹಟ್ಟಿ, ಲಕ್ಕಣ್ಣ ಕಿರಣಗಿ, ಕಿರಣ ಅನ್ನಪ್ಪನವರ, ವೆಂಕಟೇಶ ಐನಾಪುರ, ದಾನಿಶ ದೊಡ್ಮನಿ, ಮದನ ಮಾದರ, ಭೀಮಸಿ ಹೂಗಾರ, ಕುಲದೀಪ ಗದಗ್ಗೋಳ, ಮಾಂತೇಶ್ ಪೂಜಾರಿ ಹನುಮಂತ ಹುಲ್ಯಾಳ, ಹಾಗೂ ಮುಂತಾದವರು ಉಪಸ್ಥಿತರಿದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …