ಮೂಡಲಗಿ: ವಾಯುವ್ಯ ಪದವಿಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನಮಂತ ನಿರಾಣಿ ಅವರಿಗೆ ರಾಜ್ಯ ವಿಧಾನ್ ಪರಿಷತ್ ಸಭಾಪತಿಯಾಗುವ ಅವಕಾಶವಿದೆ. ಸಭಾಪತಿ ಸ್ಥಾನಕ್ಕೆ ಭೂಷಣವಾಗುವ ಸರಳ ವ್ಯಕ್ತತ್ವವನ್ನು ಅವರು ಹೊಂದಿದ್ದಾರೆ. ಅವರೊಬ್ಬ ಅಜಾತಶತ್ರು ಅವರು ಕ್ರಿಯಾಶೀಲ ಸಜ್ಜನ ರಾಜಕಾರಣಿ ಎಂದು ಹೆಸರು ಮಾಡಿದ್ದಾರೆ. ಅವರಿಗೆ ಇದೇ 13 ರಂದು ನಡೆಯುವ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕು ಎಂದು ಕರ್ನಾಟಕ ಸರಕಾರದ ಪ್ರತಿಷ್ಠಿತ ಗಡಿನಾಡ ಕನ್ನಡಿಗ ಡಾ. ಕೆ.ಜಿ ಕುಂದಣಗಾರ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಡಾ. ಸಿದ್ದಣ್ಣ ಉತ್ನಾಳ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹನಮಂತ ನಿರಾಣಿ ಅವರು ಅಧ್ಯಯನಶೀಲ ರಾಜಕಾರಣಿ ಎಂದು ಹೆಸರು ದಾಖಲಿಸಿದ್ದಾರೆ. ಅವರ ಕಾರ್ಯ ವೈಖರಿಯ ಬಗ್ಗೆ ಪಕ್ಷಾತೀತವಾಗಿ ಶ್ಲ್ಯಾಘನೆ ಕೇಳಿ ಬರುತ್ತಿದೆ. ರಾಜ್ಯದ ಪದವಿಧರರ ಕಲ್ಯಾಣಕ್ಕೆ ಅವರು ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಅವರು ಪದವಿಧರರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ದೊಡ್ಡ ಧ್ವನಿಯಾಗಿದ್ದಾರೆ ಎಂದು ಡಾ. ಉತ್ನಾಳ ಹೇಳಿದರು.
ನಿರಾಣಿ ಅವರು ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಪರಿಹಾರಕ್ಕಾಗಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಮುಳುಗಡೆ ಸಂತ್ರಸ್ತರಿಗೆ ಬಹಳಷ್ಟು ಪರಿಹಾರವನ್ನು ಒದಗಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಿರಾಣಿ ಅವರ ಗೆಲುವು ಎಲ್ಲರ ಗೆಲುವು ಆಗಲಿದೆ ಎಂದು ಡಾ. ಉತ್ನಾಳ ತಿಳಿಸಿದ್ದಾರೆ.