ಮೂಡಲಗಿ ತಹಸೀಲ್ದಾರ ಕಚೇರಿಯಲ್ಲಿ ಆಧಾರ ಕೇಂದ್ರ ಪ್ರಾರಂಭ
ಮೂಡಲಗಿ: ಸಾರ್ವಜನಿಕರ ಅನುಕೂಲಕ್ಕಾಗಿ ಮೂಡಲಗಿಯಲ್ಲಿ ಹೊಸದಾಗಿ ಆಧಾರ ನೊಂದಣಿ ಕೇಂದ್ರವನ್ನು ಆರಂಭಿಸಲಾಗಿದೆ ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ತಹಸೀಲ್ದಾರ ಡಿ ಜಿ ಮಹಾತ ಅವರು ತಿಳಿಸಿದರು.
ಗುರುವಾರದಂದು ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ನೂತನ ಆಧಾರ ನೊಂದಣಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಹೊಸ ಆಧಾರ ಕಾರ್ಡ, ಮೊಬೈಲ ನಂ, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆಗಾಗಿ ಆಧಾರ ನೊಂದಣಿ ಕೇಂದ್ರವನ್ನು ಸಂಪರ್ಕಿಸಿ, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಆಧಾರ ನೊಂದಣಿ ಕೇಂದ್ರವನ್ನು ಉದ್ಘಾಟಿಸಿ, ಚಾಲನೆ ನೀಡಿ ಮಾತನಾಡಿದರು.
ಪುರಸಭೆ ಉಪಾದ್ಯಕ್ಷೆ ರೇಣುಕಾ ಹಾದಿಮನಿ, ಶಾಸಕರ ಆಪ್ತ ಸಹಾಯಕ ದಾಸಪ್ಪ ನಾಯಿಕ, ತಹಶೀಲ್ದಾರ ಗ್ರೇಡ್-2 ಶಿವಾನಂದ ಬಬಲಿ, ಪುರಸಭೆ ಸದಸ್ಯ ಆದಂಸಾಬ ತಾಂಬೊಳಿ, ಈರಪ್ಪ ಢವಳೇಶ್ವರ, ಸಿಬ್ಬಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.