Breaking News
Home / Recent Posts / ಬಡವರಿಗೆ ನ್ಯಾಯ ಒದಗಿಸುವ ವಕೀಲ ವೃತ್ತಿ ಅತ್ಯಂತ ಹೆಮ್ಮ- ಎಸ್ ವಾಯ್ ವಟವಟಿ

ಬಡವರಿಗೆ ನ್ಯಾಯ ಒದಗಿಸುವ ವಕೀಲ ವೃತ್ತಿ ಅತ್ಯಂತ ಹೆಮ್ಮ- ಎಸ್ ವಾಯ್ ವಟವಟಿ

Spread the love

ಮೂಡಲಗಿ: ಅನ್ಯಾಯಕ್ಕೊಳಗಾದವರಿಗೆ ಹಾಗೂ ಬಡವರಿಗೆ ನ್ಯಾಯ ಒದಗಿಸುವ ವಕೀಲ ವೃತ್ತಿ ಅತ್ಯಂತ ಹೆಮ್ಮಯ ಪವಿತ್ರವಾದ ವೃತ್ತಿಯಾಗಿದೆ ಎಂದು ಬೆಂಗಳೂರಿನ ಜಾಗೃತದಳ ಕರ್ನಾಟಕ ಉಚ್ಛ ನಾಯಾಲಯದ ನಿವೃತ ವಿಲೇಖನಾಧೀಕಾರಿ ಎಸ್ ವಾಯ್ ವಟವಟಿ ಹೇಳಿದರು.

ಪಟ್ಟಣದ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾದ ಮೂಡಲಗಿ ನ್ಯಾಯಾಲಯದ ದಶಮಾನೋತ್ಸವದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಮೊದಲಿಗೆ ಆರಂಭವಾದ ನ್ಯಾಯಾಲಯ ತಾಲೂಕು ಘೋಷಣೆಯಾಗುವುದಕ್ಕೆ ಬುನಾದಿಯಾಗಿದ್ದು, ಈ ನ್ಯಾಯಾಲಯದ ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಹೆಚ್ಚುನ ಆಸಕ್ತಿಯಿಂದ ಭಾಗವಹಿಸಿದಲ್ಲಿ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ. ಜತೆಗೆ ತಮ್ಮ ವೃತ್ತಿಯಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಹೆಚ್ಚು ಜ್ಞಾನ ಸಂಪಾದನೆಯ ಜತೆಗೆ ಹಿರಿಯ ವಕೀಲರ ಮಾರ್ಗದರ್ಶನ ಪಡೆದರೆ ಉತ್ತಮ ವಕೀಲರಾಗಬಹುದು ಎಂದರು.

ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಮುರಲಿಧರ ಪೈ.ಬಿ ಮಾತನಾಡಿ, ವಕೀಲ ವೃತ್ತಿ ಎಲ್ಲಾ ವೃತ್ತಿಗಳಿಂಗಿತಲು ಸರ್ವ ಶ್ರೇಷ್ಠವಾಗಿದ್ದು, ಅದರ ಶ್ರೇಷ್ಠತೆಗೆ ಧಕ್ಕೆ ಬಾರದಂತೆ ಯುವ ವಕೀಲರು ವೃತ್ತಿ ಬಗ್ಗೆ ಅಪಾರ ಗೌರವ ಹೊಂದಿರಬೇಕು. ಗ್ರಾಹಕರಿಗೆ ಸೂಕ್ತ ನ್ಯಾಯ ಒದಗಿಸಿಕೊಡುವಲ್ಲಿ ನಿರ್ಲಕ್ಷವಹಿಸದೆ ನಿರಂತರವಾಗಿ ಶ್ರಮಿಸಬೇಕು ಎಂದರು ಸಲಹೆ ನೀಡಿದರು.

ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಮಾತನಾಡಿ, ವಕೀಲರು ಮತ್ತು ನ್ಯಾಯಾಧೀಶರ ಬಾಂಧವ್ಯ ಸ್ನೆಹಪೂರ್ವಕವಾಗಿ ಇದ್ದಲ್ಲಿ ವಾತಾವರಣ ಉತ್ತಮ ರೀತಿಯಲ್ಲಿ ಕೂಡಿರುತ್ತದೆ. ಕಕ್ಷಿದಾರಿಗೆ ತ್ವರಿತ ನ್ಯಾಯ ಒದಗಿಸಬಹುದಾಗಿದ್ದು, ದೇಶದಲ್ಲಿ ವಕೀಲ ವೃತ್ತಿಯ ಕೋರ್ಸ್‍ಗಳಿಗೆ ಎರಡನೇ ಸ್ಥಾನಮಾನವಿದೆ. ಯಾವುದೇ ಕಾರಣಕ್ಕೂ ಕೇಸನ್ನು ಗೆಲ್ಲಲ್ಲು ನನ್ನಿಂದ ಸಾಧ್ಯವಿಲ್ಲ ಎಂಬ ಅಂಜಿಕೆ ತೊರೆಯಬೇಕು. ವಕೀಲರಯ ಸದಾ ಅಧ್ಯಯನಶೀಲರಾಗುವುದು ಉತ್ತಮ ಎಂದರು.

ಈ ಕಾರ್ಯಕ್ರಮದಲ್ಲಿ ಗೋಕಾಕ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ ಡಿ ಹುಕ್ಕೇರಿ, ಸಹಾಯಕ ಸರಕಾರಿ ಅಭಿಯೋಕ ಛಾಯಾ ಬೇಡಕಿಹಾಳೆ, ಮೂಡಲಗಿ ನ್ಯಾಯವಾದಿಗಳ ಸಂಘ ಉಪಾಧ್ಯಕ್ಷ ಎಲ್.ಬಿ.ವಡೇರ, ಪ್ರಧಾನ ಕಾರ್ಯದರ್ಶಿ ವಿ ವಾಯ್ ಹೆಬ್ಬಾಳ, ಸಹ ಕಾರ್ಯದರ್ಶಿಗಳಾದ ಎಸ್ ಬಿ ತುಪ್ಪದ, ಪಿ ಎಸ್ ಮಲ್ಲಾಪೂ, ಖಜಾಂಚಿ ಎಸ್ ಎಮ್ ಗಿಡೋಜಿ, ಮಹಿಳಾ ಪ್ರತಿನಿಧಿ ಎ ಎಚ್ ಗೋಡ್ಯಾಗೋಳ ಮತ್ತಿತರು ಉಪಸ್ಥಿತರಿದ್ದರು. ನ್ಯಾಯಾದಿ ಲಕ್ಷ್ಮಣ ಅಡಿಹುಡಿ ಹಾಗೂ ಬಿ ಎನ್ ಸಣ್ಣಕ್ಕಿ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ