Breaking News
Home / Recent Posts / ಬಕ್ರೀದ್ ಹಬ್ಬದ ಪ್ರಯುಕ್ತ ಅಲೆಮಾರಿ ಜನಾಂಗಕ್ಕೆ ದಿನಸಿ ಕಿಟ್ ವಿತರಣೆ

ಬಕ್ರೀದ್ ಹಬ್ಬದ ಪ್ರಯುಕ್ತ ಅಲೆಮಾರಿ ಜನಾಂಗಕ್ಕೆ ದಿನಸಿ ಕಿಟ್ ವಿತರಣೆ

Spread the love

ಮೂಡಲಗಿ: ಬಕ್ರೀದ್ ಹಬ್ಬವು ತ್ಯಾಗ ಬಲಿದಾನಗಳ ಸಂಕೇತವಾಗಿದ್ದು ಬಡ ನಿರ್ಗತಿಕರು ಹಸಿವಿನಿಂದ ಬಳಲಬಾದೆಂದು ದಿನ ಬಳಕೆಯ ದಿನಸಿ ಕಿಟ್ ನೀಡಿ ನೆರವಾಗುತ್ತಿದ್ದೇನೆ ಎಂದು ಸಮಾಜ ಸೇವಕ ಇಜಾಜ ಕೊಟ್ಟಲಗಿ ಹೇಳಿದರು
ಪಟ್ಟಣದ ಹೊರ ವಲಯದಲ್ಲಿ ತಂಗಿದ 13 ಕುಟುಂಬದ 40 ಸದಸ್ಯರಿರುವ ಸಂಚಾರಿ ಅಲೆಮಾರಿ ಜನಾಂಗಕ್ಕೆ ಬಕ್ರೀದ್ ಹಬ್ಬದ ಪ್ರಯುಕ್ತ ಅವರಿಗೆ ಅಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿ, ಹೊಟ್ಟೆ ಪಾಡಿಗಾಗಿ ಈ ಅಲೆಮಾರಿಗಳು ಇಲ್ಲಿ ತಂಗಿರುವ ವಿಷಯ ತಿಳಿದು ನನ್ನ ಸ್ನೇಹಿತ ಬಳಗದೊಂದಿಗೆ ಮುಂದೆ ಬಂದು ಅಲ್ಪ ಪ್ರಮಾಣದ ಸೇವೆ ಸಲ್ಲಿಸಿರುವುದಾಗಿ ಹೇಳಿ,ಸರ್ಕಾರ ಇಂತಹ ನಿರ್ಗತಿಕ ಅಲೆಮಾರಿಗಳಿಗೆ ಸಹಾಯ ಸೌಲಭ್ಯ ನೀಡಿ ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರಿಗೆ ಶಾಸ್ವತವಾದ ಸೂರು ಕಲ್ಪಿಸಿ ನೆರವಾಗುವ ಅವಶ್ಯವಿದೆ ಎಂದು ಅಬಿಪ್ರಾಯಪಟ್ಟರು.
ಈ ವೇಳೆಯಲ್ಲಿ ಇಜಾಜ ಕೊಟ್ಟಲಗಿ ಸ್ನೇಹಿತ ಬಳಗದ ಸುಭ್ಹಾನ ಅರಳಿಮಟ್ಟಿ, ಅಬ್ದುಲ್ ಪೈಲವಾನ, ರಫೀಕ ಪೈಲವಾನ, ಶಿಕಂದರ ಬಾಗವಾನ, ಪಡದಪ್ಪ ಕೋತಿನ, ಮುಸ್ತಫ್ ಕಲಾರಕೊಪ್ಪ, ಮಹೆಬೂಬ ಬಾಗವಾನ, ಭರತೇಶ ಪಾಟೀಲ, ಪ್ರವೀಣ ನಾಯ್ಕ ಇನ್ನಿತರರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ