ಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮಾಜವು 35 ರಿಂದ 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಆದರೆ ಮೊದಲಿನಿಂದಲೂ ಉಪ್ಪಾರ ಸಮಾಜಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗೂ ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಅಧ್ಯಕ್ಷ ವಿಷ್ಣು ಲಾತೂರ್ ಹೇಳಿದರು.
ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳು ಕೇವಲ ಮತಗಳಿಗೆ ಅಷ್ಟೇ ಉಪ್ಪಾರ ಸಮಾಜವನ್ನು ಸೀಮಿತ ಮಾಡಿಕೊಂಡಿವೆ, ಚುನಾವಣೆ ಮುಗಿದ ನಂತರ ಯಾವುದೇ ಅಧಿಕಾರ ನೀಡದೇ ಉಪ್ಪಾರ ನಿಗಮ ಮಂಡಳಿಗೂ ಅಧ್ಯಕ್ಷರನ್ನಾಗಲಿ ಸದಸ್ಯರನ್ನಾಗಲ್ಲಿ ಆಯ್ಕೆ ಮಾಡಿಲ್ಲ. ಕಮ್ಯುನಿಸ್ಟ್ ಪಕ್ಷದಿಂದ ಕಾರ್ಮಿಕ ಮುಖಂಡ ಯು ಭೂಪತಿ ಶಾಸಕರಾಗಿದ್ದು, ದೇವರಾಜ ಅರಸ ಸರಕಾರದಲ್ಲಿ ಮಸನ್ ಶೆಟ್ಟಿ ಮತ್ತು ಜೆಡಿಎಸ್ ಸರಕಾರದಲ್ಲಿ ಎಚ್ ಸಿ ನೀರಾವರಿ ಎಂಎಲ್‌ಸಿಯಾಗಿದ್ದು, ಸಿದ್ದರಾಮಯ್ಯ ಸರಕಾರದಲ್ಲಿ ಸಿ ಪುಟ್ಟರಂಗ ಶೆಟ್ಟಿ ಸಚಿವರಾಗಿದ್ದು ಬೀಟ್ಟರೆ ಉಳಿದ ಯಾವುದೇ ಸರಕಾರಗಳು ನಮ್ಮ ಉಪ್ಪಾರ ಸಮಾಜಕ್ಕೆ ಮಾನ್ಯತೆ ನೀಡಿಲ್ಲಾ, ನಮ್ಮ ಉಪ್ಪಾರ ಸಮಾಜಕ್ಕೆ ಬರುವಂತ ಅನುದಾನದಲ್ಲಿ ಸಹ ಕಡಿತಗೊಳ್ಳಿಸಿದ್ದಾರೆ ಎಂದು ಸರಕಾರದ ವಿರುದ್ದ ಆರೋಪ ಮಾಡಿದರು.
ಇನ್ನಾದರೂ ಬಿಜೆಪಿ ಪಕ್ಷದ ವಿಧಾನ ಪರಿಷತ್ ಮತ್ತು ಉಪ್ಪಾರ ನಿಗಮ ಮಂಡಳಿಯಲ್ಲದೇ ಇನ್ನಿತರ ನಿಗಮಗಳಿಗೆ ದುಡಿದ ಈ ನಮ್ಮ ಶೋಷಿತ ಉಪ್ಪಾರ ಸಮಾಜದ ಮುಂಖಡರನ್ನು ಗುರುತಿಸಿ ಒಳ್ಳೆಯ ಸ್ಥಾನ ನೀಡುವುದರ ಮೂಲಕ ಉಪ್ಪಾರ ಸಮಾಜವನ್ನು ರಾಜಕೀಯವಾಗಿ ಗುರುತಿಸಿಕೊಳ್ಳಲು ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪರವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.ಉಪ್ಪಾರ ಮಹಾಸಭಾ ಉಪಾಧ್ಯಕ್ಷ ಅರುಣ ಸವತಿಕಾಯಿ,ಪದಾದಿಕಾರಿಗಳಾದ ವಿಠ್ಠಲ ಕುಲಿಗೂಡ,ಗುರು ಗಂಗನ್ನವರ ಇದ್ದರು