Breaking News
Home / Recent Posts / ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನೆ

ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನೆ

Spread the love

 

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನಾ ಸಮಾರಂಭವು ಶ್ರೀ ಬಸಲಿಂಗಯ್ಯ ಹಿರೇಮಠ್ (ಪಟ್ಟದೇವರು) ಮತ್ತು ಶ್ರೀ ಶಿವಲಿಂಗಪ್ಪ ಹುಬ್ಬಳ್ಳಿ ಅಜ್ಜನವರ ಸಾನಿಧ್ಯದಲ್ಲಿ ಜರುಗಿತು.
ಯಾದವಾಡ ಗ್ರಾಮ ಪಂಚಾಯತ ಸದಸ್ಯ ಕಲ್ಮೇಶ ಗಾಣಿಗಿ ಮಾತನಾಡಿ, ಎಲ್ಲ ಕುಶಲಕರ್ಮಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಮಳೆ ಬಿಸಿಲೆನ್ನದೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ ಇಂತಹ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ಸಂಘಟನೆಯ ಆಡಳಿತ ಮಂಡಳಿಯವರು ಕಟ್ಟಕಡೆಯ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ಸರಕಾರದಿಂದ ದೊರೆಯುವ ಸೌಲಭ್ಯದ ಸಂಪೂರ್ಣ ಮಾಹಿತಿ ನೀಡಿ ಪ್ರತಿಯೋಬ ಕಾರ್ಮಿಕರಿಗೂ ನ್ಯಾಯ ಒದಗಿಸುವಲ್ಲಿ ತಮ್ಮ ಪಾತ್ರ ಬಹುಮುಖ್ಯವಾಗಿದೆ, ಜನಪ್ರತಿನಿಧಿಗಳಾದ ನಾವು ಕೂಡ ಸರಕಾರದ ಯಾವುದೇ ರೀತಿ ಸೌಲಭ್ಯಗಳಿದ್ದರೂ ಪ್ರಾಮಾಣಿಕವಾಗಿ ತಮ್ಮ ಮನೆ ಬಾಗಲಿಗೆ ಮುಟ್ಟು ಹಾಗೆ ನೋಡಿಕೊಳ್ಳುವದಾಗಿ ಹೇಳಿದರು
ಕಾರ್ಯಕ್ರಮದಲ್ಲಿ ಇಮಾಮ್ ಭಾಗವಾನ್, ಶಂಕರ್ ತೋಟಗಿ ಹನುಮಂತ ಮೊಡಿ ಹನುಮಂತ ಹೊಸಮನಿ, ಕಲ್ಲಪ್ಪ ಮಾಲಮನಿ, ಸಂಘದ ಅಧ್ಯಕ್ಷ ರಮೇಶ್ ಧೂಮ್‍ಮಾಳಿ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಮತ್ತಿತರಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ