ಮೂಡಲಗಿ; ಕ್ರೀಡೆಗಳಿಂದ ದೇಹ ಮತ್ತು ಮನಸ್ಸು ಸದೃಡಗೊಂಡು ಸಾಧನೆ ಮಾಡಲು ಸಹಕಾರಿಯಾಗುತ್ತದೆ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಟೋಟಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಬೆಗಳನ್ನು ಪ್ರದರ್ಸಿಸಬೇಕೆಂದು ಶಿವಾಪೂರ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಸಾಯನ್ನವರ ಹೇಳಿದರು
ತಾಲೂಕಿನ ಶಿವಾಪುರ(ಹ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ವಲಯ ಮಟ್ಟದ ಕ್ರೀಡಾ ಕೂಟದ ದ್ವಜಾರೊಹಣ ನೆರೆವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಜೆ.ಜೆ.ಹಾಸ್ಪಿಟಲ್ ನಿರ್ದೇಶಕ ಎಸ್ ಎಸ್ ಪಾಟೀಲ ವಹಿಸಿದರು, ಎಸ್.ಡಿ.ಪಾಟೀಲ ಸಮಾರಂಭವನ್ನು ಉದ್ಘಾಟಿಸಿದರು, ಕೆ ಬಿ ಮುಧೊಳ, ಐ.ಬಿ.ಬೆಳಗಲಿ, ಕೆ.ಜಿ.ಮುಧೊಳ, ಎಂ ಎಂ.ಜುಂಜರವಾಡ, ಗುಳಪ್ಪ ರಡ್ದೆರಟ್ಟಿ, ಎಂ.ಪಿ.ಡವಳೇಸ್ವರ, ಎಸ್.ವಾಯ್.ಜುಂಜರವಾಡ, ಶಾಲೆಯ ಮುಖ್ಯೋಪಾದ್ಯಾಯ ಕೆ.ಎಂ.ವಾಣಿ , ಎಂ.ಪಿ.ಲಂಗೊಟಿ, ಬಿ ಎಸ್.ಕಾಪಸಿ, ವಾಯ ಬಿ ಬುಸಗೊನ್ನ ಮತ್ತು ಸಿ.ಆರ್.ಸಿ ಅಧಿಕಾರಿಗಳು, ಶಿಕ್ಷಕರು, ಸಂಘ ಸಂಸ್ಥೆಯ ಪದಾದಿಕಾರಿಗಳು,ಗ್ರಾಮ ಪಂಚಾಯತ ಸದಸ್ಯರು, ಕ್ರೀಡಾ ಪ್ರೇಮಿಗಳು ಇದ್ದರು.
