Breaking News
Home / Recent Posts / ಸಂಗೊಳ್ಳಿ ರಾಯಣ್ಣನರ ಕಂಚಿನ ಮೂರ್ತಿಯ ರಥಕ್ಕೆ ಭವ್ಯ ಸ್ವಾಗತ

ಸಂಗೊಳ್ಳಿ ರಾಯಣ್ಣನರ ಕಂಚಿನ ಮೂರ್ತಿಯ ರಥಕ್ಕೆ ಭವ್ಯ ಸ್ವಾಗತ

Spread the love

ಮೂಡಲಗಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನರ ಕಂಚಿನ ಮೂರ್ತಿಯ ರಥಕ್ಕೆ ಮೂಡಲಗಿ ಪಟ್ಟಣದ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಬುಧವಾರದಂದು ಭವ್ಯ ಸ್ವಾಗತ ಕೋರಲಾಯಿತು.
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ರಥಕ್ಕೆ ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಷಂಬಿ ಹಾಗೂ ಮೂಡಲಗಿ ಪುರಸಭೆಯ ಅಧ್ಯಕ್ಷ ಹನುಮಂತ ಗುಡ್ಲಮನಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಡಾ ಎಸ್ ಎಸ್ ಪಾಟೀಲ ಮಾತನಾಡಿ, ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದ ಅಪ್ರತಿಮ ಹೋರಾಟಗಾರರಾಗಿದ್ದರು. ಅμÉ್ಟೀ ಅಲ್ಲದೆ ಒಂದೇ ಸಮಾಜಕ್ಕೆ ಸೀಮಿತವಾಗದೆ ಈ ದೇಶಕ್ಕಾಗಿ ಹೋರಾಡಿ ಪ್ರಾಣ ಬಲಿದಾನೀಡಿದ ಮಹಾನ ನಾಯಕ ಸಂಗೊಳ್ಳಿ ರಾಯಣ್ಣ ಎಂದು ಹೇಳಿದರು.
ಯುವ ಮುಖಂಡ ಸಿದ್ದಣ್ಣ ದುರದುಂಡಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದಂತ ಅಪ್ಪಟ ಕ್ರಾಂತಿವೀರ ರಾಯಣ್ಣ ಎಂದು ಹೇಳಿದರು.
ರಾಯಣ್ಣನ ಮೂರ್ತಿ ಸೇವಕ ಸಚಿನ ಭೂತಾಳಿ ಹಾಲುಮತ ಸಮಾಜದ ಮುಖಂಡರಾದ ಜಡೆಪ್ಪ ಮಂಗಿ ಈರಪ್ಪ ಶಾಬಣ್ಣವರ, ಭೀಮಸಿ ಮಂಗಿ, ಗೋಪಾಲ ಶಾಬಣ್ಣವರ, ಕೃಷ್ಣ ಶಾಬಣ್ಣವರ, ಸಂಜು ಶಾಬಣ್ಣವರ, ಸತ್ಯಪ್ಪ ರಾಜಾಪುರ, ಅಲ್ಲಪ್ಪ ಹಳ್ಳೂರ, ಮಲ್ಲು ಶಾಬಣ್ಣವರ, ಮಲಕಾರಿ ದುರದುಂಡಿ, ಆನಂದ ಲಂಗೋಟಿ, ಲೋಹಿತ್ ಗಸಿ,್ತ ವೆಂಕಪ್ಪ ಗುಡ್ಲಮನಿ, ಶ್ರೀಕಾಂತ ಕೌಜಲಗಿ, ಕರೆಪ್ಪ ಹೊಸಮನಿ, ಮುತ್ತಪ್ಪ ಹಳ್ಳೂರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಸಮಾಜ ಬಂಧುಗಳು ಮುಂತಾದವರು ಉಪಸ್ಥಿತರಿದ್ದರು.
 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ