ಕುಲಗೋಡ: 75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ “ಹರ್ ಘರ್ ತಿರಂಗ” ಅಭಿಯಾನ ಹಮ್ಮಿಕೊಂಡಿರುವ ಸಂತಸದ ವಿಷಯ.
ಅಗಷ್ಟ 13 ಮುಂಜಾನೆ 8 ಗಂಟೆಯ ಒಳಗೆ ಮನೆಯ ಮೇಲೆ ಹಾರಿಸುವ ರಾಷ್ಟ್ರ ಧ್ವಜ ಕಟ್ಟುವ ಪ್ರತಿಯೊಬ್ಬರೂ ಮನೆಯ ಮೇಲೆ,ಮುಂದೆ ಹಾದು ಹೊಗಿರುವ ವಿದ್ಯುತ್ ತಂತಿ ಹಾಗೂ ನಿಮ್ಮ ಮನೆಗೆ ಬಳಸುವ ಸರ್ವಿಸ್ ತಂತಿಗಳಿಂದ ಜಾಗೃತಿ ವಹಿಸಿ ಧ್ವಜ ಕಟ್ಟಬೇಕು. ಕಾರಣ ವಿದ್ಯುತ್ತಗೆ ಸಂಭಂದಿತ ವಸ್ತುಗಳಿಂದ ವಿದ್ಯುತ್ ತಗುಲಿ ಅನಾಹುತ ನಡೆಯುವ ಸಾಧ್ಯತೆ ಇದೆ. ಕುಲಗೋಡ ಶಾಖೆಗೆ ಸಂಬಂಧಿಸಿದ ಕುಲಗೋಡ, ಕೌಜಲಗಿ, ಅವರಾದಿ, ಅರಳಿಮಟ್ಟಿ, ಢವಳೇಶ್ವರ. ಬೀಸನಕೊಪ್ಪ. ಹುಣಶ್ಯಾಳ. ಹೊಸಟ್ಟಿ. ಹೊನಕುಪ್ಪಿ. ಲಕ್ಷ್ಮೇಶ್ವರ. ಕಳ್ಳಿಗುದ್ದಿ.ರಡ್ಡೇರಟ್ಟಿ. ಮನ್ನಿಕೇರಿ ಸೇರಿದಂತೆ ಇನ್ನೂಳಿದ ಗ್ರಾಮದ ಗ್ರಾಮಸ್ಥರು ಜಾಗ್ರತಿ ವಹಿಸಬೇಕು ಎಂದು ಕುಲಗೋಡ ಕೆ.ಇ.ಬಿ ಶಾಖಾಧಿಕಾರಿ ಶ್ರೀಧರ ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1) ಮನೆಯ ಮುಂದೆ ಹಾದು ಹೋಗಿರುವ ವಿದ್ಯುತ್ ತಂತಿ, 2)ನಿಮ್ಮ ಮನೆಗೆ ವಿದ್ಯುತ್ ತೆಗೆದುಕೊಂಡ ವಾಯರ್ ಹಳೆಯದಿದ್ದು ಅಲಲ್ಲಿ ಕಟ್ಟ ಆಗಿರುವ ಸಾಧ್ಯತೆ ಇರುತ್ತೆ. 3) ದ್ವಜ ಮನೆಯ ಮೇಲೆರುವ ಜೆ.ಎ ಪೈಪಿಗೆ ಕಟ್ಟಬಾರದು ಕಾರಣ ವಿದ್ಯುತ್ ತಗಲುವ ಸಾಧ್ಯತೆ ಇರುವದು.4) ಅತಿಯಾಗಿ ಮಳೆಯಾಗಿರುವದರಿಂದ ತೆವಾಂಶ ಇರುವದರಿಂದ ವಿದ್ಯುತ್ ತಗಲುವ ಸಾಧ್ಯತೆ.