ಮೂಡಲಗಿ: ‘ರಕ್ಷಾ ಬಂಧನವು ಸೋದರತೆ, ಸೌಹಾರ್ದತೆಯನ್ನು ಬಲಪಡಿಸುವುದು, ಸಂಬಂಧಗಳನ್ನು ಗಟ್ಟಿಗೊಳಿಸುವುದು’ ಎಂದು ಮೂಡಲಗಿಯ ಈಶ್ವರಿ ವಿಶ್ವವಿದ್ಯಾಲಯದ ರೇಖಾ ಅಕ್ಕಾಜೀ ಅವರು ಹೇಳಿದರು.
ಇಲ್ಲಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಭಾರತೀಯ ಹಬ್ಬಗಳು, ಆಚರಣೆಗಳಿಂದ ದೇಶದ ಸಂಸ್ಕøತಿಯು ಶ್ರೀಮಂತವಾಗಿದೆ. ಪರಮಾತ್ಮನ ನಿತ್ಯ ಧ್ಯಾನಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ತಂದುಕೊಳ್ಳಬೇಕು ಎಂದರು.
ಭಾಗವಹಿಸಿದ್ದ ಎಲ್ಲ ಭಕ್ತರಿಗೆ ರಕ್ಷಾ ಬಂಧನ ಮಾಡಿದರು.
ಸವಿತಾ ಅಕ್ಕಾಜೀ, ಶಿವಪುತ್ರಯ್ಯ ಮಠಪತಿ, ವೈ.ಬಿ. ಕುಲಿಗೋಡ, ಶಂಕರ ಸೋನವಾಲಕರ, ಶಿವಾನಂದ ಮುಗಳಖೋಡ, ಜಿ.ಕೆ. ಮುರಗೋಡ, ಮಲ್ಲಿಕಾರ್ಜುನ ಎಮ್ಮಿ, ಈರಪ್ಪ ಹಂದಿಗುಂದ, ಶಂಕರ ಮುಗಳಖೋಡ, ತುಂಗವ್ವ ಸೋನವಾಲಕರ, ಸುಮಿತ್ರಾ ಸೋನವಾಲಕರ, ಮಹಾದೇವಿ ತಾಂವಶಿ, ರಜನಿ ಬಂದಿ, ಲಕ್ಷ್ಮೀ ಇದ್ದರು.