ಮೂಡಲಗಿ : ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಎಮ್ಮೆ ಕರವನ್ನು ಬಲಿ ಪಡೆದ ಘಟನೆಯ ಹಿನ್ನೇಲೆಯಲ್ಲಿ ಇಂದು ಶುಕ್ರವಾರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು,
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. ಚಿರತೆಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಪ್ರವರ್ತರಾಗಿದ್ದಾರೆ, ಬಲೆ ಹಾಕಲಾಗಿದೆ ಮತ್ತು ಚಿರತೆಯ ಹೆಜ್ಜೆ ಜಾಡನ್ನು ಗಮನಿಸಿ ಅದು ಆ ವ್ಯಾಪ್ತಿಯಲ್ಲಿಯೇ ಇರುವದನ್ನು ಪತ್ತೆ ಹಚ್ಚಲಾಗಿದೆ ಮತ್ತು ಸರಿಯಾದ ಮಾಹಿತಿಯನ್ನು ತಿಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು ಅರಣ್ಯ ನಾಶಕ್ಕೆ ನಾವೇ ಹೋಣೆಯಾಗಿದ್ದೆವೆ ಅರಣ್ಯ ಕಡಿಮೆಯಾದಂತೆ ಕಾಡು ಪ್ರಾಣಿಗಳು ನಾಡು ಸೇರುತ್ತಿವೇ ಎಂದರು,
ತಹಶೀಲದಾರ ಸೇರಿದಂತೆ ಹಲವು ಅಧಿಕಾರಿಗಳು ಧರ್ಮಟ್ಟಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಮುಂಜಾಗೃತ ಕ್ರಮವಾಗಿ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳು ಧ್ವಣಿ ವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ, ಈ ಸಮಯದಲ್ಲಿ ತಹಶೀಲ್ದಾರ ದಿಲಶಾದ ಮಹಾತ್, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಗೋಕಾಕ ಅರಣ್ಯ ಇಲಾಖೆಯ ಅಧಿಕಾರಿ ಕೆಂಪಣ್ಣ ವಣ್ನೂರ, ಹಾಗೂ ಮುಖಂಡರಾದ ಮಲ್ಲಪ್ಪ ನೇಮಗೌಡರ, ಡಾ, ಬಸವರಾಜ ಪಾಲಭಾಂವಿ, ಪ್ರಕಾಶ ಮಾದರ, ಮಾಹಾನಿಂಗ ವಂಟಗೋಡಿ, ಜಗದೀಶ ತೇಲಿ ಸಹಿತ ಹಲವರಿದ್ದರು,
ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳ್ಳಿ ಅವರ ತೋಟದಲ್ಲಿ ಚಿರತೆ ಎಮ್ಮೆ ಕರುವನ್ನು ಹೋತ್ತೂಯುವ ಧೃಶ್ಯ ಸಿಸಿ ಕ್ಯಾಮರಾದಲ್ಲಿ ಸೇರೆಯಾಗಿದ್ದು ತಾಲೂಕಿನ್ಯಾದಾಂತ್ಯ ತುಂಬಾ ವೈರಲ್ ಆಗಿದೆ, ಮುಂಜಾಗ್ರತೆ ಕ್ರಮವಾಗಿ ಗ್ರಾಮದ ಸುತ್ತಮುತ್ತಲಿನ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಘೋಷಿಸಿದ್ದಾರೆ,