ಮೂಡಲಗಿ: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವುದರ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸೋಣ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.
ಮೂಡಲಗಿ ನಗರದ ಹಲವು ಗಣ್ಯರಿಗೆ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ತಿರಂಗ ಧ್ವಜಗಳನ್ನು ವಿತರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸ್ವಾತಂತ್ರ್ಯದ ಸವಿ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರು ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಕರೆ ನೀಡಿದ್ದಾರೆ. ಹರ್ ಘರ್ ತಿರಂಗಾ ನಮ್ಮೆಲ್ಲರ ಸ್ವಾಭಿಮಾನದ ಪ್ರತಿಕವಾಗಿದ್ದು, ಪ್ರತಿ ಮನೆಯಲ್ಲಿಯೂ ತಿರಂಗಾ ಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಶಿವಬೋದರಂಗ ಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀ ದತ್ತಾತ್ರೇಯ ಬೋಧÀ ಸ್ವಾಮಿಜಿಗಳಿಗೆ ರಾಷ್ಟ್ರ ಧ್ವಜ ವಿತರಿಸಿದರು. ಬಸಗೌಡ ಪಾಟೀಲ, ಶಿವಬಸು ಹಂದಿಗುಂದ, ಡಾ. ಎಸ್.ಎಸ್. ಪಾಟೀಲ, ರವಿ ಸಣ್ಣಕ್ಕಿ ಅವರ ನಿವಾಸಗಳಿಗೆ ಭೇಟಿ ನೀಡಿ ರಾಷ್ಟ್ರ ಧ್ವಜಗಳನ್ನು ವಿತರಿಸಿದರು.
ಪ್ರಮುಖ ಕಾರ್ಯಕರ್ತರಾದ ಪ್ರಕಾಶ ಮಾದರ, ಡಾ. ಬಿ. ಎಂ ಪಾಲಭಾವಿ, ಈರಪ್ಪ ಢವಳೇಶ್ವರ, ಹಣಮಂತ ಸತರಡ್ಡಿ, ಮಹಾನಿಂಗ ಒಂಟಗೂಡೆ, ಮಹಾಂತೇಶ ಕುಡಚಿ, ಸುರೇಶ ಅಂತರಗಟ್ಟಿ, ಜಗದೀಶ ತೇಲಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು
ಮೂಡಲಗಿ: ನಗರದಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜ ವಿತರಿಸುತ್ತಿರುವ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ.