ಮೂಡಲಗಿ : ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ದೇಶಾದ್ಯಂತ ಐತಿಹಾಸಿಕ, ಸ್ಮರಣಾತ್ಮಕವಾಗಿ ಆಚರಣೆ ಮಾಡಲಾಗುತ್ತಿದ್ದು, ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಅದ್ಬುತವಾದ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸಾಧಕರನ್ನು ಸನ್ಮಾನಿಸು ಕಾರ್ಯ ಶ್ಲಾಘನೀಯ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅರಭಾವಿ ಬಿಜೆಪಿ ಮಂಡಲ ಹಾಗೂ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೊರಿಯಲ್ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಬಸವ ಮಂಟದಲ್ಲಿ ಜರುಗಿದ, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯವಾಗಿ ಅರಭಾವಿ ಮತಕ್ಷೇತ್ರದ 75 ಸಾಧಕರಿಗೆ ಅರಭಾವಿ ಮತಕ್ಷೇತ್ರ ರತ್ನ ಪ್ರಶಸ್ತಿ ನೀಡುವುದರ ಜೊತೆಗೆ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, 75 ಸಾಧಕರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪತ್ನಿಯರನ್ನು ಸನ್ನಾನಿಸಿ ಗೌರವಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದರು.
ಹಾರೂಗೇರಿ ಸಾಹಿತಿ ವಿ ಎಸ್ ಮಾಳಿ ಮಾತನಾಡಿ, ಪ್ರತಿ ಭಾರತೀಯನೂ ಹೆಮ್ಮೆಯಿಂದ ಸಂಭ್ರಮಿಸುವಂತಹ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸ್ಮರಿಸುವ ದಿನ. ಪ್ರಧಾನಿ ಮೋದಿ ಅವರ ಹರ್ ಘರ್ ತಿರಂಗ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ಸಿಕಿದ್ದು ಕಾಶ್ಮೀರದಿಂದ ಕನ್ಯಾಕುಮಾರಿವರೆಗ ತ್ರಿವರ್ಣ ಧ್ವಜ ಹಾರಾಡ್ತಿದೆ. ವಿಶೇಷವಾಗಿ ಅರಭಾವಿ ಮತಕ್ಷೇತ್ರದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಧರ್ಮ ಪತ್ನಿಯರಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಗೌರವಿಸುತ್ತಿರುವುದು ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಒಂದು ವಿಶೇಷವಾದ ಕಳೆ ತಂದಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮಾತನಾಡಿ, 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ಅರಭಾವಿ ಮಂಡಲದಿಂದ ಹಮ್ಮಿಕೊಳ್ಳಲಾಗಿದ್ದ 3 ಬೈಕ್ ರ್ಯಾಲಿ ಹಾಗೂ ಟ್ರಾಕ್ಟರ್ ರ್ಯಾಲಿಗಳಿಗೆ ಅರಭಾವಿ ಕ್ಷೇತ್ರಾದ್ಯಂತ ಅಭೂತಪೂರ್ವ ಪ್ರತಿಕ್ರೀಯೆ ದೊರತ್ತಿದೆ. ಅರಭಾವಿ ಮತಕ್ಷೇತ್ರ ರತ್ನ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರ ಧರ್ಮಪತ್ನಿಗಳಿಗೆ ಹಾಗೂ ಕೃಷಿ, ಸಾಹಿತ್, ಕ್ರೀಡೆ, ಕಲೆ ಮತ್ತು ಸಂಗೀತ, ಸಮಾಜ ಸೇವೆ ಹಾಗೂ ಶಿಕ್ಷಣ ಪ್ರೇಮಿ, ನೇಕಾರ, ಸರ್ಕಾರಿ ಇಲಾಖೆ ಹಾಗೂ ಪತ್ರಕರ್ತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳಿಗೆ ಗುರುತಿಸಿ ಸತ್ಕರಿಸುವ ಕಾರ್ಯ ಶಾಸಕ ಬಾಲಚಂದ್ರ ಜಾರಕಿಹೊಳಿಯ ಕನಸಾಗಿತ್ತು ಎಂದರು.
ಈ ಸಂದರ್ಭದಲ್ಲಿ ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಬಿಜೆಪಿ ಅರಭಾವಿ ಮಂಡಲ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ, ಮಹಾಂತೇಶ ಕುಡಚಿ, ಬಿಜೆಪಿ ಎಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಪುಸರಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಪುಸರಭೆ ಸದಸ್ಯರಾದ ಜಯಾನಂದ ಪಾಟೀಲ, ಗಪಾರ್ ಡಾಂಗೆ, ರವಿ ಸಣ್ಣಕ್ಕಿ, ಪಾಂಡು ಮಹೇಂದ್ರಕ, ಬಿಜೆಪಿ ಕಾರ್ಯಕರ್ತರಾದ ಹಣಮಂತ ಸತ್ತರಡ್ಡಿ, ಸಿದ್ದು ದುರದುಂಡಿ, ಮಲ್ಲು ಯಾದವಾಡ, ವಿಠ್ಠಲ ಸುಳ್ಳನ್ನವರ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
ಪೋಟೋ ಕ್ಯಾಪನ್> ಮೂಡಲಗಿ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯವಾಗಿ ಅರಭಾವಿ ಮತಕ್ಷೇತ್ರದ 75 ಸಾಧಕರಿಗೆ ಅರಭಾವಿ ಮತಕ್ಷೇತ್ರ ರತ್ನ ಪ್ರಶಸ್ತಿ ಪ್ರಧಾನ
ಫೋಟೋ ಫೈಲ್ ನಂ> 16ಎಮ್‍ಡಿಎಲ್‍ಜಿ3