Breaking News
Home / Recent Posts / ಪಿಜಿ ಹುಣಶ್ಯಾಳ ಗ್ರಾಮದಲ್ಲಿ ಕ್ರೇಜಿ ಯುವಕರ ಕಳಕಳಿಯ ಕಾರ್ಯ: ದೇಶದ ಹೀರೋಗಳಿಗೆ ಸನ್ಮಾನಿಸುವುದೇ ನಿಜವಾದ ಹೀರೋಗಿರಿ: ಶಿವಲಿಂಗ ಸಿದ್ನಾಳ

ಪಿಜಿ ಹುಣಶ್ಯಾಳ ಗ್ರಾಮದಲ್ಲಿ ಕ್ರೇಜಿ ಯುವಕರ ಕಳಕಳಿಯ ಕಾರ್ಯ: ದೇಶದ ಹೀರೋಗಳಿಗೆ ಸನ್ಮಾನಿಸುವುದೇ ನಿಜವಾದ ಹೀರೋಗಿರಿ: ಶಿವಲಿಂಗ ಸಿದ್ನಾಳ

Spread the love

 

ಮೂಡಲಗಿ: ನಾವು ಹೀರೋ ಆಗುವುದು ನಮ್ಮ ಗೆಟಪ್‌ನಿಂದಲೂ ಅಲ್ಲ, ಮೇಕಪ್‌ನಿಂದಲೂ ಅಲ್ಲ, ಸಮಾಜದ ಕಳಕಳಿಯ ಕಾಯಕದಿಂದ ಮಾತ್ರ ಹೀರೋ ಆಗಲು ಸಾಧ್ಯ ಎಂದು ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.

ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಶತಮಾನದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅನ್ನ ಕೊಡುವ ರೈತ, ಗಡಿ ಕಾಯುವ ಯೋಧ ನಿಜವಾದ ಹೀರೋ ಆಗಿದ್ದು, ಅಂಥ ಹೀರೋಗಳನ್ನು ಸನ್ಮಾನಿಸುವ ಮೂಲಕ ಗ್ರಾಮದ ಯುವಕರು ನಿಜವಾದ ಹೀರೋಗಿರಿ ಮೆರೆದಿದ್ದಾರೆ. ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಸವೆದ ಹಿರಿಯ ಜೀವಗಳನ್ನು ಗ್ರಾಮದ ರತ್ನಗಳನ್ನು ಸನ್ಮಾನಿಸುವ ಮೂಲಕ ಪಿಜಿ ಹುಣಶ್ಯಾಳ ಗ್ರಾಮದ ಯುವಕರು ಕ್ರೇಜಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಶಾಲೆಯಲ್ಲಿನ ಬೃಹತ್ ವೇದಿಕೆಯಲ್ಲಿ ತಾಯ್ನಾಡಿನ ಗಡಿ ಕಾಯ್ದು ತವರಿಗೆ ಮರಳಿದ ದೇಶದ ಹೀರೋಗಳಾದ ೧೨ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಅಲ್ಲದೇ ನಾನಾ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ೨೨ಕ್ಕೂ ಹೆಚ್ಚು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು. ಸರ್ವ ಸನ್ಮಾನಿತರನ್ನು ಎರಡೂ ಬದಿಯಲ್ಲಿ ನಿಂತ ವಿದ್ಯಾರ್ಥಿಗಳು ಹಾಗೂ ಸಂಘಟಕರು ಪುಷ್ಪವೃಷ್ಠಿ ಮಾಡುವ ಮೂಲಕ ವೇದಿಕೆಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ವೇದಿಕೆಯಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ಹಾಡು, ನೃತ್ಯ, ಏಕಪಾತ್ರಾಭಿನಯ, ನಾಟಕ, ಮಲ್ಲಕಂಬ, ಹಗ್ಗದ ಸಾಹಸ ಕೌಶಲ್ಯ ಸೇರಿದಂತೆ ನಾನಾ ಪ್ರತಿಭಾ ಪ್ರದರ್ಶನ ಮಾಡಿ ರಂಜಿಸಿದರು. ಅದ್ಭುತ ವೇದಿಕೆಯಲ್ಲಿ ಆದರ್ಶದ ಕಾರ್ಯ ಮಾಡುವ ಮೂಲಕ ಆಜಾದಿ ಕಾ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಜಾತ್ರೋಪಾದಿಯಲ್ಲಿ ಜನ ಸೇರಿ ಯುವಕರ ಕಾರ್ಯಕ್ರಮವನ್ನು ಕಣ್ತುಂಬಿಕೊAಡರು.

ಇದಕ್ಕೂ ಮುನ್ನ ಸರಕಾರಿ ಪ್ರಾಥಮಿಕ ಶಾಲೆ, ಉರ್ದು ಶಾಲೆ, ಖಾಸಗಿ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಗಳ ಒಕ್ಕೂಟದ ವಿದ್ಯಾರ್ಥಿಗಳು ಟ್ರ್ಯಾಕ್ಟರ್ ನಲ್ಲಿ ನಾಡಿನ ಮಹನೀಯರ ಛದ್ಮವೇಷದಲ್ಲಿ ಕಂಗೊಳಿಸಿ ಜೀವಂತ ಸ್ತಬ್ಧ ಚಿತ್ರ ಪ್ರದರ್ಶಿಸುತ್ತ ಊರ ತುಂಬ ಮೆರವಣಿಗೆ ಮಾಡಲಾಯಿತು.

ಮಹಾಂತೇಶ್ ರೋಡ್ಡನವರ್,ಕಲ್ಮೇಶ್ ಕೌಜಲಗಿ
ಜ್ಞಾನೇಶ್ವರ ಭಂಗೆರಿ, ಪತ್ರಯು ತೇರದಾಳ, ನಿಂಗಪ್ಪ ನೆಸರಗಿ, ಶಿವಾನಂದ ಕೌಜಲಗಿ,
ಬಸಲಿಂಗ್ ಶಕ್ಕಿ, ಕಲ್ಮೇಶ ಕಮತ್
ಅಪ್ಪಣ್ಣ ಮುಗದುಮ್, ಬಸವರಾಜ್ ಹಡಗಿನಳ,
ಪ್ರವೀಣ್ ಪತ್ತಾರ್, ಶಂಕರ್ ಹಿರೇಮಠ್,
ಓಂಕಾರ್ ಕುಲ್ಕರ್ಣಿ, ಬಳಯ್ಯ ಹಿರೇಮಠ್ ,
ಬಸಲಿಂಗ ನೇಸರಗ, ಮಲ್ಲಯ್ಯ ಗೂಡಿ,
ಶ್ರಿದರ್ ಬಡಿಗೇರ್, ಪ್ರದೀಪ್ ಪತ್ತಾರ್
ಶ್ರಿದರ್ ಹಿರೇಮಠ್, ಕೃಷ್ಣ ಬಡಿಗೇರ್, ಮುತ್ತು ಕೌಜಲಗ, ಮುತ್ತು ನೆಸರಗಿ, ನಾಗರಾಜ್ ಕುಲಕರ್ಣಿ, ಮುರುಗೆಂದ್ರ ಹಿರೇಮಠ್,
ವಿನೋದ್ ಸಣ್ಣಕ್ಕಿ, ಗುರು ಕೋಟಬಾಗಿಿ,
ವಿಜಯ್ ಸಣ್ಣಕಿ, ಅಜಿತ್ ಅಂಬಡಿ,
ಸಂತೋಷ ಸುಳ್ಳ ಪಾಗೊಳ, ಈರಣ್ಣ ಪಾಟೀಲ್,
ಬಸವರಾಜ್ ಕೌಜಲಗಿ, ನಾಗರಾಜ್ ಪಾಟೀಲ್,
ಅರ್ಜುನ್ ಗಲಗಲಿ, ದತ್ತು ನಾನ್ನಾರಿ

ಸರಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಲಕ್ಷö್ಮಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಗ್ರಾಪಂ ಅಧ್ಯಕ್ಷ, ಸದಸ್ಯರು, ಮುಖಂಡರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ