ಮೂಡಲಗಿ: ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ, ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರಬೇಕಾದರೆ ಕ್ರೀಡೆ ಅತಿ ಅವಶ್ಯಕವಾಗಿದೆ ಎಂದು ಮೂಡಲಗಿ ಪಿಎಸ್ಐ ಹಾಲಪ್ಪ ಬಾಲದಂಡಿ ಹೇಳಿದರು. ಅವರು ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾ ಇಲಾಖೆ ಬೆಳಗಾವಿ ತಾಲೂಕ ಪಂಚಾಯಿತಿ ಪುರಸಭೆ ಶಿಕ್ಷಣ ಇಲಾಖೆ ಮೂಡಲಗಿ ಶಿಕ್ಷಣ ಸಂಸ್ಥೆ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಡಲಗಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಮೂಡಲಗಿ ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ ಕ್ರೀಡಾಜ್ಯೋತಿ ಸ್ವೀಕರಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಮಾತನಾಡಿ ದಸರಾ ಕ್ರೀಡಾಕೂಟ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದವರೆಗೆ ಹೋಗಲು ಅವಕಾಶವಿದೆ ಇದರ ಸದುಪಯೋಗವನ್ನು ಎಲ್ಲಾ ಕ್ರೀಡಾಪಟುಗಳು ನಮ್ಮ ನಾಡಿನ ಕೀರ್ತಿಯನ್ನು ತರಬೇಕೆಂದು ಹೇಳಿದರು. ಹೆಣ್ಣಿರಲಿ ಗಂಡಿರಲಿ ಮನೆಗೊಂದು ಕ್ರೀಡಾಪಟು ಇರಲಿ. ಕಬಡ್ಡಿ ಕೋಕೋ ವಾಲಿಬಾಲ್ ತ್ರೋಬಾಲ್ ರನ್ನಿಂಗ್ ಹೀಗೆ ಹಲವಾರು ವೈಯಕ್ತಿಕ ಆಟಗಳು ನಡೆಸುವ ಕ್ರೀಡಾ ಇಲಾಖೆ ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳಿದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಸೋಣವಲ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 7ನೇ ಏಶಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ಗೆ ಆಯ್ಕೆಯಾದ ಲಕ್ಷ್ಮಿ ರಡರಟ್ಟಿ ದಸರಾ ಪಂದ್ಯಾವಳಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೂಡಲಗಿ ಪುರಸಭೆ ಉಪಾಧ್ಯಕ್ಷ ರೇಣುಕಾ ಹಾದಿಮನಿ ದೈಹಿಕ ಶಿಕ್ಷಣ ಪರಿವೀಕ್ಷಕ ಜೂನೆದಿ ಪಟೇಲ್ ರವೀಂದ್ರ ಸೋನವಾಲಕರ ಕಾಲೇಜಿನ ಪ್ರಾಚಾರ್ಯ ಎ ಪಿ ರೆಡ್ಡಿ ಮಂಜುನಾಥ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ ಅಡಿಹುಡಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಶಿವನಪ್ಪ ಗುದಗಣವರ ಯುವ ಸಬಲೀಕರಣ ಕ್ರೀಡಾ ಇಲಾಖೆ ಬಸವರಾಜ ಜಕ್ಕಣ್ಣವರ ಅನ್ವರ ನದಾಫ್ ಬಸು ಜಂಡೆಕುರುಬರ ಡಾ ದೀಪಾ ಮಾಚಪ್ಪನವರ ಅಕ್ಕಮಹಾದೇವಿ ಮಾದರ ರಾಘವೇಂದ್ರ ದೊಡವಾಡ ಯಲ್ಲಪ್ಪ ಭರಮಣ್ಣವರ ಲಕ್ಷ್ಮಿಭಾಯಿ ಜೋಕಾನಟ್ಟಿ ಗೂಳಪ್ಪ ವಿಜಯನಗರ ಐಶ್ವರ್ಯ ತಳವಾರ ಯಮನವ್ವ ಮಾದರ ಸಂಘಟಿಕರು ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಭೀಮಶಿ ಬಡಗಣ್ಣವರ ನಿರೂಪಿಸಿ ವಂದಿಸಿದರು. ಜಿಲ್ಲಾ ಯುವ ಪ್ರಶಸ್ತಿ ವಿಜೇತ ಹನುಮಂತ ಮದನವರ ವಂದಿಸಿದರು.