Breaking News
Home / Recent Posts / ‘ಶ್ರದ್ಧೆ, ಪರಿಶ್ರಮದಿಂದ ಕಾರ್ಯಮಾಡಿದರೆ ಯಶಸ್ಸು ಕಂಡಿತವಾಗಿ ದೊರೆಯುತ್ತದೆ’ – ಜಡಿಸಿದ್ಧೇಶ್ವರಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ

‘ಶ್ರದ್ಧೆ, ಪರಿಶ್ರಮದಿಂದ ಕಾರ್ಯಮಾಡಿದರೆ ಯಶಸ್ಸು ಕಂಡಿತವಾಗಿ ದೊರೆಯುತ್ತದೆ’ – ಜಡಿಸಿದ್ಧೇಶ್ವರಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ

Spread the love

ಸಿಎ ಪಾಸು ಮಾಡಿರುವ ಬಾಹುಬಲಿಗೆ ಅಭಿನಂದನಾ ಸಮಾರಂಭ

ಮೂಡಲಗಿ: ‘ಶ್ರದ್ಧೆ, ಪರಿಶ್ರಮದಿಂದ ಕಾರ್ಯಮಾಡಿದರೆ ಯಶಸ್ಸು ಕಂಡಿತವಾಗಿ ದೊರೆಯುತ್ತದೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಪಟಗುಂದಿ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ಲೆಕ್ಕಪರಿಶೋಧನಾ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಾಹುಬಲಿ ಹೊಸಮನಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಛಲ ಇರಬೇಕು ಅದರೊಂದಿಗೆ ಪ್ರಯತ್ನ ಇರಬೇಕು ಎಂದರು.
ಪಟಗುಂದಿ ಗ್ರಾಮದ ಬಾಹುಬಲಿ ಹೊಸಮನಿ ಸಿಎ ಪಾಸು ಮಾಡಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಸಾಕಷ್ಟು ಕಷ್ಟಪಟ್ಟು ಓದಿರುವ ಬಾಹುಬಲಿಯ ಯಶಸ್ಸು ಗ್ರಾಮೀಣ ಭಾಗದ ಯುವಕರಿಗೆ ಮಾದರಿಯಾಗಿದೆ ಎಂದರು.
ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು ಉತ್ತಮ ಮಾರ್ಗದರ್ಶನವನ್ನು ನೀಡುವ ಮೂಲಕ ಅಂಥ ಪ್ರತಿಭೆಗಳನ್ನು ಬೆಳಕಿಗೆ ತರಲು ಸಾಧ್ಯ. ಸಿಎ ಮತ್ತು ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ, ಐಬಿಪಿಎಸ್‍ದಂತ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಗ್ರಾಮೀಣ ವಿದ್ಯಾರ್ಥಿಗಳು ಗಮನ ನೀಡುವ ಮೂಲಕ ಯಶಸ್ಸು ಕಾಣಬೇಕು ಎಂದರು.
ಕಳೆದ ವರ್ಷ ಸಂತೋಷ ಹೊಸಮನಿ ಮತ್ತು ಧರ್ಮರಾಜ ಪೋಳ ಇವರು ಸಿಎ ಪಾಸು ಮಾಡಿ ಮೂಡಲಗಿ ತಾಲ್ಲೂಕಿಗೆ ಕೀರ್ತಿ ತಂದಿದ್ದರು. ಈಗ ಆ ಸಾಲಿಗೆ ಬಾಹುಬಲಿ ಅನ್ನಪ್ಪ ಹೊಸಮನಿ ಸೇರುವ ಮೂಲಕ ತಾಲ್ಲೂಕಿನ ಕೀರ್ತಿ ಇನ್ನಷ್ಟು ಹೆಚ್ಚಿಸಿದ್ದಾರೆ ಎಂದರು.
ಸಾಧಕ ಬಾಹುಬಲಿ ಹೊಸಮನಿ ಅವರನ್ನು ಸಂಘಟಕರು ಮತ್ತು ಜಡಿಸಿದ್ಧೇಶ್ವರ ಮಠದಿಂದ ಶಿವಾನಂದ ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿ ಶಿಕ್ಷಕ ಸದಾಶಿವ ಬೆಳಗಲಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ಪಡೆದುಕೊಳ್ಳಬೇಕು. ಸಮಾಜವು ಮೆಚ್ಚವಂತ ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಶಾಂತಿಸಾಗರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರೀಸ ಹುಕ್ಕೇರಿ, ನಿವೃತ್ತ ಶಿಕ್ಷಕ ಬಾಬುರಾವ ಜರಾಳೆ, ನೇಮು ಜರಾಳೆ, ಜಂಬೂ ಹೊಸಮನಿ, ರಾಮಣ್ಣ ಕಸ್ತೂರಿ, ಮಾಣಿಕ ಬೋಳಿ, ಗಿರೆಪ್ಪ ಪಾಟೀಲ, ತವನಪ್ಪ ಬೋಳಿ ಅತಿಥಿಯಾಗಿ ಭಾಗವಹಿಸಿದ್ದರು.
ನಿವೃತ್ತ ಶಿಕ್ಷಕ ಮನೋಹರ ಮೂಡಲಗಿ ಪ್ರಾಸ್ತಾವಿಕ ಮಾತನಾಡಿದರು. ಮಹಾವೀರ ಸಲ್ಲಾಗೋಳ, ಹೇಮಂತ ಟೋಪನ್ನವರ ನಿರೂಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ