ರಾಜ್ಯದಲ್ಲಿ ಇಂದು ಒಂದೇ ದಿನ 141 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ.
ರಾಜ್ಯ ಸರ್ಕಾರ ಇಂದಿನಿಂದ ದಿನಕ್ಕೆ ಒಂದು ಬಾರಿ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ಇಂದು ಒಂದೇ ದಿನ 141 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇವರಲ್ಲಿ 91 ಜನ ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಬೆಂಗಳೂರು ನಗರ 33, ಯಾದಗಿರಿ 18, ದಕ್ಷಿಣ ಕನ್ನಡ 14, ಉಡುಪಿ 3, ಶಿವಮೊಗ್ಗ 6, ದಾವಣಗೆರೆ 4, ಹಾವೇರಿ 4, ಕೋಲಾರ 4, ಹಾಸನ 13, ವಿಜಯಪುರ 11, ಬೀದರ್ 10, ಕಲಬುರಗಿ 2, ಮೈಸೂರು 2, ಉತ್ತರ ಕನ್ನಡ 2, ಧಾರವಾಡ 2, ಬೆಳಗಾವಿ, ಚಿತ್ರದುರ್ಗ , ಬೆಂಗಳೂರು ಗ್ರಾಮಾಂತರ , ತುಮಕೂರು ಜಿಲ್ಲೆಗಳಲ್ಲಿ ತಲಾ ಒಂದು ಕೆಸ್ ಪತ್ತೆಯಾಗಿದೆ
IN MUDALGI Latest Kannada News