Breaking News
Home / Recent Posts / ಮುಸ್ಲಿಂ ಸಮಾಜದ ಜನರ ದಿಕ್ಕು ತಪ್ಪಿಸುವಂತ ಕೆಲಸ ತಹಶೀಲ್ದಾರ ಮಾಡಿದ್ದಾರೆ : ಶರೀಫ್ ಪಟೇಲ್

ಮುಸ್ಲಿಂ ಸಮಾಜದ ಜನರ ದಿಕ್ಕು ತಪ್ಪಿಸುವಂತ ಕೆಲಸ ತಹಶೀಲ್ದಾರ ಮಾಡಿದ್ದಾರೆ : ಶರೀಫ್ ಪಟೇಲ್

Spread the love

ಮೂಡಲಗಿ: ರಾಜ್ಯ ವಕ್ಘ್ ಬೋರ್ಡ ಬೆಂಗಳೂರು ಇವರು ಜು.30ರಂದು ಹೊರಡಿಸಿರುವ ಆದೇಶದನ್ವಯ ಮೂಡಲಗಿಯ ಬಜ್ಮೆ-ಎ-ತೋಹಿದ್ ತಂಜಿಮ ಕಮಿಟಿಯ ಆಡಳತಾಧಿಕಾರಿಯಾನ್ನಾಗಿ ತಹಶೀಲ್ದಾರ ಡಿ ಜಿ ಮಹಾತ್ ಅವರನ್ನು ನೇಮಕ ಮಾಡಿ ಅಧಿಕಾರಯವನ್ನು ವಹಿಸಿಕೊಳ್ಳಲು ಆದೇಶ ನೀಡಿತ್ತು. ಆದರೆ ತಹಶೀಲ್ದದಾರ ಅವರು ಕಮಿಟಿಯ ಸದಸ್ಯರಿಗೆ ನೋಟಿಸಿ ನೀಡದ 7ದಿನದ ಬಳಿಕ ಅಧಿಕಾರವನ್ನು ವಹಿಸಿಕೊಳ್ಳಬೇಕಾದ ತಹಶೀಲ್ದಾರ ಅವರು ನೋಟಿಸಿ ನೀಡಿದ ಮರುದಿನವೇ ಅಧಿಕಾರವನ್ನು ವಹಿಸಿಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಮಿಟಿಯ ಅಧ್ಯಕ್ಷ ಶರೀಫ್ ಪಟೇಲ್ ಹೇಳಿದರು.

ಶುಕ್ರವಾರದಂದು ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದ ಹತ್ತಿರ ಇರುವ ಜಾಮಿಯಾ ಮಸೀದಿ ಆವರಣದಲ್ಲಿ ಜರುಗಿದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಹಶೀಲ್ದಾರ ಅವರು ಕಮಿಟಿಯ ಸದಸ್ಯರಿಗೆ ನೀಡಿದ ನೋಟಿಸ್ ನಂತರ 7 ದಿನಗಳವರೆಗೂ ಕಾಲಾವಕಾಶ ಇರುತ್ತದೆ. ಆದರೆ ಸದಸ್ಯರ ಗಮನಕ್ಕೆ ತರದೇ ನೋಟಿಸ್ ನೀಡದ ಮರುದಿನ ಅಧಿಕಾರ ವಹಿಸಿಕೊಂಡಿರುವುದಾಗಿ ಪತ್ರಿಕಾ ಪ್ರಟಕಣೆ ನೀಡಿದ್ದು, ಇದು ನಮ್ಮ ಸಮಾಜದ ಜನರ ದಿಕ್ಕು ತಪ್ಪಿಸುವಂತ ಕೆಲಸ ಮಾಡಿದ್ದಾರೆ ಎಂದು ತಹಶೀಲ್ದಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕಮಿಟಿಯ ಉಪಾಧ್ಯಕ್ಷ ಮಲ್ಲಿಕ್ ಕಳ್ಳಿಮನಿ ಮಾತನಾಡಿ, ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಇರುವ ಖೈರಾತಿ ಪೀರ (ಮೆಹಬೂಬ ಸುಭಾನಿ) ದರ್ಗಾದ ಮೂಲ ಆಸ್ತಿ 44ಎಕರೆ 37ಗುಂಟೆ ಇದ್ದು, ನಮ್ಮ ಸಮಾಜದ ಹಿರಿಯರಯ ಸಾರ್ವಜನಿಕವಾಗಿ 11 ಎಕರೆ ಆಸ್ತಿಯನ್ನು ಬಿಟ್ಟುಕೊಟ್ಟಿದು, ಇನ್ನೂಳಿದ 33ಎಕರೆ 37ಗುಂಟೆ ಆಸ್ತಿಯನ್ನು ಕರ್ನಾಟಕ ರಾಜ್ಯ ವಕ್ಘ್ ಮಂಡಳಿಯಲ್ಲಿ ನೋಂದಾಯಿಸಲಾಗಿದೆ. ಆದರೆ ಕ್ರಮೇಣವಾಗಿ ಆಸ್ತಿಯನ್ನು ಕೆಲವು ಜನರು ಸೇರಿ ದುರುಪಯೋಗ ಮಾಡಿಕೊಂಡು ತಮ್ಮ ಸ್ವಂತ ಆಸ್ತಿಯಂತೆ ಮಾರಾಟ ಮಾಡಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಕಾಣದ ಕೈಗಳು ಅಧಿಕಾರಿಗಳ ಕೈ ಕಟ್ಟಿದ್ದಾರೆ ಎಂದು ಅನುಮಾನುಗಳು ಹುಟ್ಟುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇನ್ನಾದರೂ ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಮಾಡಿದವರ ವಿರುದ್ದ ಸೂಕ್ತ ಕ್ರಮಕೈಗೊಂಡು ದರ್ಗಾದ ಮೂಲ ಆಸ್ತಿಯನ್ನು ಮರಳಿ ನೀಡುವಂತೆ ಮಂಡಳಿಯ ಅಧಿಕಾರಿಗಳಿಗೆ ಆಗ್ರಹಿಸಿದರು.

ಕಮಿಟಿಯ ಕಾರ್ಯದರ್ಶಿ ಸಲಿಮ ಇನಾಮದಾರ ಮಾತನಾಡಿ, ಸದರಿ ಆಡಳಿತಾಧಿಕಾರಿಗಳ ಅಧಿಕಾರವನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡದಲ್ಲಿ ತಡೆಯಾಜ್ಷೆಯನ್ನು ಪಡೆಯಲು ಆ. 8ರಂದು ಅರ್ಜಿಸಲಿಸಲಾಗಿತ್ತು, ಆ.25ರಂದು ತಹಶೀಲ್ದಾರ ಅವರ ಆಡಳಿತಾಧಿಕಾರಿಗಳ ಅಧಿಕಾರವನ್ನು ತಡೆದು ಕರ್ನಾಟಕ ಉಚ್ಛ ನ್ಯಾಯಾಲಯ ಆದೇಶ ನೀಡಿದ್ದು, ಸಮಾಜದ ಜನರು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಹಸನಸಾಬ ಮುಗುಟಖಾನ್, ಅಮೀರಹಮ್ಜಾ ಥರಥರಿ, ಅಪುಟಸಾಬ ತಾಂಬೂಳಿ, ಹಾಜಿಸಾಬ್ ಪೀರಜಾಧೆ, ಮಲ್ಲಿಕ್ ಡಾಂಗೆ, ರಹಮಾನ್ ಝಾರೆ, ಚಾಂದಸಾಬ್ ದೇಸಾಯಿ, ಕಮಿಟಿಯ ಸದಸ್ಯರಾದ ಇಮಾಹುಶೇನ್ ಮುಲ್ಲಾ, ದಾದುಸಾಬ್ ಮುಗುಟಖಾನ್, ನಿಜಾಮ್ ಡಾಂಗೆ, ರಾಜು ಅತ್ತಾರ. ಧಸ್ತಗೀರ ನಾಧಪ್, ಬಂದಾನವಾಜ್ ತಾಂಬೂಳಿ, ಯುನುಸ ಹವಾಲ್ದಾರ ಹಾಗೂ ಅನೇಕರು ಸಮಾಜದ ಮುಸ್ಲಿಂ ಬಾಂಧವರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ