ಮೂಡಲಗಿ: ಮೂಡಲಗಿಯ ಚೈತನ್ಯ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು 2022ರ ಮಾರ್ಚ್ ಅಂತ್ಯಕ್ಕೆ ರೂ. 1.53 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ ಹೇಳಿದರು.
ಶುಕ್ರವಾರದಂದು ಸಂಘದ ಸಭಾ ಭವನದಲ್ಲಿ ಸಂಘದ 2021-22ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸದ್ಯ ಸೊಸೈಟಿಯು ಬೆಟಗೇರಿ, ಧರ್ಮಟ್ಟಿ, ಯರಗಟ್ಟಿ, ಲೋಕಾಪೂರ, ಮುನ್ಯಾಳ, ಮಂಟೂರಗಳಲ್ಲಿ 6 ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳು ಪ್ರಗತಿಯಲ್ಲಿವೆ. ಬೆಳ್ಳಿ ಮಹೋತ್ಸವದ ಹೊತ್ತಿಗೆ ಎಲ್ಲ ಶಾಖೆಗಳು ಸ್ವಂತ ಕಟ್ಟಡ ಹೊಂದಲಿವೆ. ಸಂಘದ ಪ್ರಗತಿಗೆ ಶ್ರಮಿಸಿದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಶೇರುದಾರರಿಗೆ ಅಭಿನಂದಿಸಿ, ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ, ಕೃಷಿ ಚಟುವಟಿಕೆಗಳಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಸೊಸೈಟಿಯು ಉತ್ತೇಜನವನ್ನು ನೀಡುತ್ತಲಿದೆ ಎಂದು ಹೇಳಿದ ಅವರು, ರೂ. 2.03 ಕೋಟಿ ಶೇರು ಬಂಡವಾಳ, ರೂ. 7.48 ಕೋಟಿ ನಿಧಿಗಳು, ರೂ. 81.52 ಕೋಟಿ ಠೇವುಗಳನ್ನು ಹೊಂದಿದೆ ಹಾಗೂ ಸೊಸೈಟಿಯು ಗ್ರಾಹಕರ ಭದ್ರತೆಗಾಗಿ ಇತರೆ ಬ್ಯಾಂಕ್‍ಗಳಲ್ಲಿ ರೂ. 37.89ಕೋಟಿ ಹೂಡಿಕೆ ಮಾಡಿದೆ. ರೂ. 44.46 ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ವಿತರಣೆ ಮಾಡಿದೆ. ಸದ್ಯ ಸೊಸೈಟಿಯು ರೂ. 95.48 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರು.
ಕರಾಸಪಸಂ ಮಹಾಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ, ನಿವೃತ್ತ ಪಾಚಾರ್ಯ ಆರ್ ಎ ಶಾಸ್ತ್ರಿಮಠ, ದಂತವೈಧ್ಯ ಸಂಜಯ ಶಿಂಧಿಹಟ್ಟಿ, ಲೆಕ್ಕ ಪರಿಶೋಧಕ ಎಸ್ ಬಿ ಗದಾಡಿ, ಉಮೇಶ ಬಾಳಿ, ಸುಭಾಸ ಕಮದಾಳ ಮಾತನಾಡಿದರು.
ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮತ್ತು ಸಾಧಕರನ್ನು ಸೇರಿ 20 ಜನರನ್ನು ಸತ್ಕರಿಸಿ ಗೌರವಿಸಲಾಯಿತು.
ಸಂಘದ ನಿರ್ದೇಕಶರಾದ ಉದಯಕುಮಾರ ಜೋಕಿ ವರದಿ ವಾಚನ, ಬಸವರಾಜ ಹಿರೇಮಠ ಲಾಭ ಹಾನಿ, ವಿಠ್ಠಲ ನೇಮಗೌಡರ ಲಾಭ ವಿಭಾಗಣಿ, ಅಶ್ವಿನಿ ಘಟ್ನಟ್ಟಿ ಅಡಾವೆ ಪತ್ರಿಕೆ, ಪ್ರಕಾಶ ಗಳತಗಿ ಅಂದಾಜು ಪತ್ರಿಕೆ ವಾಚಿಸಿದರು.
ವಿವಿಧ ಶಾಖಾ ಆಡಳಿತ ಮಂಡಳಿ ಅಧ್ಯಕ್ಷರು,ಉಪಾಧ್ಯಕ್ಷರು,ಗಣ್ಯರು, ಸಿಬ್ಬಂದಿಗಳು ಇದ್ದರು.
ವೈ ಬಿ ಪಾಟೀಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಬಿ ಎಸ್ ಬಿಜಗುಪ್ಪಿ ನಿರೂಪಿಸಿ, ರಮೇಶ ಸಂಕನ್ನವರ ವಂದಿಸಿದರು.