‘ಒಗ್ಗಟ್ಟು ಇದ್ದಲ್ಲಿ ಸಹಕಾರಿ ಸಂಸ್ಥೆಗಳು ಪ್ರಗತಿ ಸಾಧಿಸುತ್ತವೆ’
ಮೂಡಲಗಿ: ‘ಜನರ ಒಗ್ಗಟ್ಟು ಇದ್ದಲ್ಲಿ ಸಹಕಾರಿ ಸಂಘ, ಸಂಸ್ಥೆಗಳು ಬೆಳೆಯುತ್ತವೆ. ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಗ್ರಾಮೀಣ ಜನರ ಬದುಕನ್ನು ಉಜ್ವಲಗೊಳಿಸುವೆ’ ಎಂದು ಯುವ ಧುರೀಣ ಸವೋತ್ತಮ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಪಟಗುಂದಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನಿವೃತ್ತ ಪಿಎಸ್‍ಐ ಬಸವರಾಜ ಉಪ್ಪಾರ, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸಂತೋಷ ಹೊಸಮನಿ, ಬಾಹುಬಲಿ ಹೊಸಮನಿ, ಸರ್ಕಾರಿ ಹುದ್ದೆಗೆ ನೇಮಕವಾಗಿರುವ ಗ್ರಾಮದ ಭರತೇಶ ಬೋಳಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು.
ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಅಜೀತ ಹೊಸಮನಿ ಸಂಘದ ವರದಿ ವಾಚನ ಮಾಡಿ ಮಾತನಾಡಿ ಪಟಗುಂದಿ ಪಿಕೆಪಿಎಸ್ ಸಂಘವು 1948ರಲ್ಲಿ ಸ್ಥಾಪನೆಯಾಗಿದ್ದು ಸದ್ಯ 843 ಸದಸ್ಯರಿದ್ದಾರೆ, ಶೂನ್ಯ ಬಡ್ಡಿಯಲ್ಲಿ ಸಾಲ ಸೇರಿದಂತೆ ರೈತರಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಸಂಘದ ನಿರ್ದೇಶಕರಾದ ಮಹಾದೇವ ಯರನಾಳ, ತಮ್ಮಣ್ಣ ನಾಯ್ಕ, ಜಡೆಪ್ಪ ಮಂಗಿ, ಬಸಪ್ಪ ಪಾಟೀಲ, ವಿಠ್ಠಲ ಕಡಪಟ್ಟಿ, ಬದ್ರೋದ್ದನಿ ಪಿರಜಾದೆ, ರಾಮಪ್ಪ ಗಣಾಚಾರಿ, ಮಲ್ಲಪ್ಪ ಜಿನವಾಡ, ರಾಮಪ್ಪ ತುಪ್ಪದ, ಬ್ಯಾಂಕ್ ನಿರೀಕ್ಷಕ ಜಿ.ಐ. ಲಂಕೆಪ್ಪನ್ನವರ, ಬಸವರಾಜ ಕಂಬಾರ, ಬಸಪ್ಪ ಚಿಂಚೆವಾಡಿ, ಮಹಾವೀರ ಸಲ್ಲಾಗೋಳ ಇದ್ದರು.