Breaking News
Home / Recent Posts / ಸೆ.26 ರಿಂದ ಅ.5 ರ ವರೆಗೆ ಶ್ರೀ ದುರ್ಗಾದೇವಿ 14ನೇ ವರ್ಷದ ನವರಾತ್ರಿ ಉತ್ಸವ

ಸೆ.26 ರಿಂದ ಅ.5 ರ ವರೆಗೆ ಶ್ರೀ ದುರ್ಗಾದೇವಿ 14ನೇ ವರ್ಷದ ನವರಾತ್ರಿ ಉತ್ಸವ

Spread the love

ಸೆ.26 ರಿಂದ ಅ.5 ರ ವರೆಗೆ ಶ್ರೀ ದುರ್ಗಾದೇವಿ 14ನೇ ವರ್ಷದ ನವರಾತ್ರಿ ಉತ್ಸವ

ಮೂಡಲಗಿ ಸೆ.25 : ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ದುರ್ಗಾದೇವಿಯ 14ನೇ ವರ್ಷದ ನವರಾತ್ರಿ ಉತ್ಸವ ಸೆ.26 ರಿಂದ ಅ.05 ರ ವರೆಗೆ 10ದಿನಗಳ ಕಾಲ ಪಟ್ಟಣದ ಬಸವರಂಗ ಮಂಟಪದಲ್ಲಿ ವಿಜೃಂಭಣೆಯಿಂದ ಜರುಗುವುದು, ಎಂದು ಉತ್ಸವ ಸಮಿತಿಯ ಪದಾಧಿಕಾರಿಯಾದ ಕುಮಾರ ಗಿರಡ್ಡಿ ತಿಳಿಸಿದರು.
ರವಿವಾರದಂದು ಪಟ್ಟಣದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು.ಮೊದಲನೇ ದಿನವಾದ ಸೋಮವಾರ ಮೂರ್ತಿ ಘಟ ಸ್ಥಾಪನೆ ಕಾರ್ಯಕ್ರಮದಲ್ಲಿ ಮೂಡಲಗಿಯ ಸಿದ್ದ ಸಂಸ್ಥಾನ ಮಠದ, ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು , ಉದ್ಘಾಟಕರಾಗಿ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು, ಹಾಗೂ ವಿಶೇಷ ಆಮಂತ್ರಿತರಾಗಿ ಪುರಸಭೆ ಸರ್ವ ಸದಸ್ಯರು ,ಗುರು-ಹಿರಿಯರು ಹಾಗೂ ಮೂಡಲಗಿಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಉತ್ಸವ ಸಮಿತಿಯ ಪದಾಧಿಕಾರಿಗಳಾದ ಜಗದೀಶ ತೇಲಿ ಹಾಗೂ ಚೇತನ ನಿμÁನಿಮಠ ನವರಾತ್ರಿ ಉತ್ಸವದ ಅಂಗವಾಗಿ ಜರುಗಲಿರುವ ಕಾರ್ಯಕ್ರಮಗಳ ಮಾಹಿತಿ ನೀಡುತ್ತ, ಸೆ 26 ರಂದು ಶ್ರೀ ದುರ್ಗಾದೇವಿ ಮೂರ್ತಿ ಪ್ರತಿÁ್ಠಪನೆ, ಸೆ 27ರಂದು ಸಾಯಂಕಾಲ 7ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ, ಸೆ.28 ರಂದು ಸಾಯಂಕಾಲ 7ಗಂಟೆಗೆ ಓಲ್ಡ್ ಐಸ್ ಗೋಲ್ಡ್ ಗೀತಾಂಜಲಿ ರಸಮಂಜರಿ ಕಾರ್ಯಕ್ರಮ, ಸೆ.29ರಂದು ಟ್ರ್ಯಾಕ್ ಸಿಂಗಿಂಗ್ ಕಾಂಪಿಟಿಷನ್, ಸೆ.30ರಂದು ರಸ ಮಂಜರಿ ಕಾರ್ಯಕ್ರಮ, ಅ.1ರಂದು ಸಾಯಂಕಾಲ 7ಗಂಟೆಗೆ ಲಾವಣಿ ನೃತ್ಯ ಕಾರ್ಯಕ್ರಮ, ಅ.2ರಂದು 6ಗಂಟೆಗೆ ಆಧ್ಯಾತ್ಮಿಕ ಪ್ರವಚನ ಹಾಗೂ 7ಗಂಟೆಗೆ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮ, ಅ.3ರಂದು ದುರ್ಗಾಷ್ಟಮಿ ಪ್ರಯುಕ್ತ ಚಂಡಿ ಹೋಮ ಹಾಗೂ ಅನ್ನ ಪ್ರಸಾದ ಮತ್ತು ಸಾಯಂಕಾಲ 7ಗಂಟೆಗೆ ಸುಗಮ ಸಂಗೀತ ಕಾರ್ಯಕ್ರಮ, ಅ.4ರಂದು ಸಾಯಂಕಾಲ 7ಕ್ಕೆ ಕುಂಟ ಕೋನ ಮೂಕ ಜಾಣ ಹಾಸ್ಯಭರಿತ ನಾಟಕ, ಕೊನೆಯ ದಿನವಾದ ಅ.5ರಂದು ಸಾಯಂಕಾಲ 6ಗಂಟೆಗೆ ಮಹಿμÁಸುರ ದಹನದೊಂದಿಗೆ ದೇವಿ ವಿಸರ್ಜನಾ ಕಾರ್ಯಕ್ರಮ ಜರುಗುವುದು ಎಂದರು.
ಉತ್ಸವ ಸಮಿತಿಯ ಪದಾಧಿಕಾರಿ ಈರಪ್ಪ ಢವಳೇಶ್ವರ್ ಮಾತನಾಡಿ ಈ 10 ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವದಲ್ಲಿ ಭಕ್ತರು ಸಮೃದ್ಧ ಜೀವನಕ್ಕಾಗಿ, ನವದಂಪತಿಗಳಿಂದ ಪೂಜೆ,ಕಂಕಣ ಭಾಗ್ಯಕ್ಕಾಗಿ ಪೂಜೆ , ಸಂತಾನ ಭಾಗ್ಯಕ್ಕಾಗಿ, ಶಿಕ್ಷಣದ ಪ್ರಗತಿಗಾಗಿ,ಅಕಾಲ ಮೃತ್ಯು ಪರಿಹಾರಕ್ಕಾಗಿ ಹಾಗೂ ಸರ್ವಸಿದ್ಧಿ ಸಲುವಾಗಿ ವಿಶೇಷ ಪೂಜೆಗಾಗಿ ಸಮಿತಿಯವರನ್ನು ಸಂಪರ್ಕಿಸಬಹುದಾಗಿದೆ, ಮೂಡಲಗಿ ಹಾಗೂ ಸುತ್ತಮುತ್ತ ಗ್ರಾಮದ ಎಲ್ಲ ಜನರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸುಗೊಳಿಸಬೇಕಾಗಿ ವಿನಂತಿಸುತ್ತ ಹೆಚ್ಚಿನ ಮಾಹಿತಿಗಾಗಿ ಈರಪ್ಪ ಢವಳೇಶ್ವರ್- 9590718444, ಹಾಗೂ ಕುಮಾರ ಗಿರಡ್ಡಿ 9448637930 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೋರಿದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ