ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿಹೊಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ ಸರಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಗಾಣಿಗ ಸಮುದಾಯ ಜಗದ್ಗುರು ಕೋಲ್ಹಾರದ ಶ್ರೀ ಯೋಗಿ ಕಲ್ಲಿನಾಥ ಸ್ವಾಮೀಜಿ ಆಗ್ರಹಿಸಿರು.
ಅವರು ಮೂಡಲಗಿ ಪಟ್ಟಣದ ಶ್ರೀ ಜ್ಯೋತಿ ಅರ್ಬನ್ ಸೋಸಾಯಿಟಿಯಲ್ಲಿ ಗಾಣಿಗ ಸಮಾಜದಿಂದ ಸತ್ಕಾರ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆ ಮತ್ತು ರಾಜ್ಯದಲ್ಲಿ ಅನೇಕ ಮತ ಕ್ಷೇತ್ರದಲ್ಲಿ ಗಾಣಿಗ ಸಮುದಾಯದ ಮತಗಳು ನಿರ್ಣಾಕವಾಗಿದು, ಅನೇಕ ಶಾಸಕರು ಆಯ್ಕೆಯಾಗಲ್ಲಿಕ್ಕೆ ಸಮುದಾಯದ ಮತಗಳು ಕಾರಣವಾಗಿವೆ, ಎಲ್ಲ ಸಮುದಾಯದವರ ಪ್ರೀತಿ,ವಾತ್ಸಲ್ಯ, ವಿಶ್ವಾಸ ಗಳಿಸಿರುವ ಗಾಣಿಗ ಸಮುದಾಯವನ್ನು ಮುಂಬರುವ ದಿನಗಳಲ್ಲಿ ಸರಕಾರ ಕಡೆಗಣಿಸಬಾರದು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಗಾಣಿಗ ಸಮಾಜ ಮತ್ತು ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಜ್ಯೋತಿ ಬ್ಯಾಂಕ ಅಧ್ಯಕ್ಷ ಮಲ್ಲಪ್ಪ ಮದಗುಣಕಿ, ಹಣಮಂತ ಗಾಣಿಗೇರ, ಮಲ್ಲಪ್ಪ ಮಲ್ಲಪ್ಪ ನೇಮಗೌಡ್ರ, ಚಂದ್ರು ಗಾಣಿಗ, ಶ್ರೀಶೈಲ್ ಜೈನಾಪೂರ, ಅಪ್ಪಯ್ಯಪ್ಪ ನೇಮಗೌಡ್ರ, ಅರ್ಜುನ್ ಗಾಣಿಗೇರ, ಶ್ರೀಮಂತ ಗಾಣಿಗೇರ, ಬಸವರಾಜ ನೇಮಗೌಡ್ರ, ಪ್ರಕಾಶ ಕಾಳಪ್ಪಗೋಳ, ಮಲ್ಲಿಕಾರ್ಜುನ ಕಾಳಪ್ಪಗೋಳ ಮತ್ತಿತರರು ಇದ್ದರು.