‘ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯ’
ಮೂಡಲಗಿ: ‘ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಪರಿಗಣಿಸಿದೆ ಕ್ರೀಡಾ ಮನೋಭವ ಮತ್ತು ಶ್ರದ್ಧೆಯಿಂದ ಭಾಗವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ರವಿ ಪಿ. ಸೋನವಾಲಕರ ಹೇಳಿದರು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರುÀ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದೆ ಎಂದರು.
ಅತಿಥಿ ಪಿಎಸ್‍ಐ ಎಚ್.ವೈ. ಬಾಲದಂಡಿ ಮಾತನಾಡಿ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ಪ್ರಾಥಮಿಕ ಹಂತವು ಅಡಿಪಾಯವಿದ್ದಂತೆ. ಇದು ಮಕ್ಕಲ್ಲಿ ಕ್ರೀಡೆ ಬಗ್ಗೆ ಪ್ರೇರಣೆ ನೀಡುತ್ತದೆ ಎಂದರು.
ಅತಿಥಿ ಬಾಲಶೇಖರ ಬಂದಿ ಮಾತನಾಡಿ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತವೆ. ಕ್ರೀಡೆಗೆ ಜಾತಿ, ಧರ್ಮ, ಮೇಲು, ಕೀಳು ಎನ್ನುವದಿಲ್ಲ. ಕ್ರೀಡಾ ಸಂಘಟನೆಗಳಿಂದ ಶಾಂತಿ, ಸೌಹಾರ್ದತೆಯ ಬೆಳೆಯುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಪ್ರಾಸ್ತಾವಿಕ ಮಾತನಾಡಿದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಿಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ತಾಲ್ಲೂಕು ಪಂಚಾಯ್ತಿ ಸಿಇಒ ಎಫ್.ಎಸ್. ಚಿನ್ನನ್ನವರ, ಪುರಸಭೆ ಸದಸ್ಯರಾದ ಶಿವಾನಂದ ಚಂಡಕಿ, ರವಿ ಸಣ್ಣಕ್ಕಿ, ಶಿವಾನಂದ ಸಣ್ಣಕ್ಕಿ, ಹುಸೇನ ಶೇಖ್, ಡಾ. ಭಾರತಿ ಕೋಣಿ, ವೆಂಕಟೇಶ ಸೋನವಾಲಕರ, ಪ್ರದೀಪ ಲಂಕೆಪ್ಪನ್ನವರ, ಲಕ್ಷ್ಮಣ ಅಡಿಹುಡಿ ಇದ್ದರು.
ಶಿವಾಪುರದ ಕೆ.ಎಚ್. ಪಾಟೀಲ ನಿರೂಪಿಸಿದರು, ಎಲ್.ಎ. ಮೇಕೆಮಡಿ ವಂದಿಸಿದರು.