ಮೂಡಲಗಿ: ಇಂದಿನ ಯುವ ಪೀಳಿಗೆಯು ಹಿರಿಯರಿಂದ ಸಿಗುವ ಜ್ಞಾನ, ಸಲಹೆ ಸೂಚನೆಗಳನ್ನು ಪೆದುಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ವಿವಿಧ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಶನಿವಾರದಂದು ತಹಶೀಲ್ದಾರ ಕಚೇರಿಯ ಸಭಾಂಗಣಲ್ಲಿ ಗೊಕಾಕ ತಾಲೂಕಾ ಕಾನೂನು ಸೇವೆಗಳ ಸಮಿತಿ, ಮೂಡಲಗಿ ನ್ಯಾಯವಾದಿಗಳ ಸಂಘ, ಮೂಡಲಗಿ ತಾಲೂಕಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ, ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಕಾನೂನು ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ತಂದೆ ತಾಯಿರನ್ನು ಪ್ರೀತಿ ವಿಶ್ವಾಸಿದಿಂದ ನೋಡಿಕೊಳ್ಳಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ದುರಂತ. ಹಿರಿಯ ನಾಗರಿಕರಿಗೆ ತಮ್ಮ ಮಕ್ಕಳು ಯಾವುದೇ ತೊಂದರೆ ನೀಡಿದಲ್ಲಿ ಹಿರಿಯ ನಾಗರಿಕರು ದೂರುಗಳನ್ನು ನೀಡಿದಲ್ಲಿ ತಮ್ಮ ಸಮಸ್ಯೆಗಳನ್ನು ಸೂಕ್ತ ಪರಿಹಾರ ನೀಡಲಾಗುತ್ತೆ ಎಂದರು.
ನ್ಯಾಯವಾಧಿ ಕೆ ಎಲ್ ಹುಣಶ್ಯಾಳ ಮಾತನಾಡಿ, ಹಿರಿಯರಿಗೆ ಗೌರವ ನೀಡುವುದನ್ನು ಭಾರತ ದೇಶದಲ್ಲಿ ಪುರಾತಣ ಕಾಲಿದಿಂದಲೂ ಸಂಪ್ರದಾಯವನ್ನಾಗಿಸಿಕೊಂಡು ಬಂದಿದ್ದರು ಆದರೆ ಕಲಿಯುಗದಲ್ಲಿ ಯುವ ಪೀಳಿಗೆ ಆ ಸಂಪ್ರದಾಯ ಮರೆತು, ಹಿರಿಯ ಮಾತಿಗೆ ಬೆಲೆ ಕೊಡದೇ ಮನೆಯಿಂದ ಹೊರಗೆ ಹಾಕಿ ಹಿರಿಯ ಗೌರವವನ್ನು ತೆಗೆಯುವಂತ ಅನೇಕ ಘಟನೆಗಳು ಜರುಗಿವೆ. ನಾವೇಲ್ಲರೂ ನಮ್ಮ ಮಕ್ಕಳನ್ನು ಮೊದಲು ಬೇರೆ ಕಡೆಗಳಲ್ಲಿ ಶಿಕ್ಷಣ ಕಲಿಸುವ ಬದಲು ತಮ್ಮ ಹತ್ತಿರ ಇಟ್ಟುಕೊಂಡು ಶಿಕ್ಷಣ ಜೊತೆಗೆ ನಮ್ಮ ಭಾರತೀಯ ಸಂಸ್ಕøತಿಯನ್ನು ಕಲಿಸಿದರೇ ಮಾತ್ರ ಅಂತಹ ಘಟನೆಗಳನ್ನು ತಡೆಹಿಡಿಯಲು ಸಾಧ್ಯ ಎಂದರು.
ತಹಶೀಲ್ದಾರ ಡಿ ಜಿ ಮಹಾತ್ ಹಾಗೂ ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಗೋಡಿಗೌಡರ ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಕ ಅಧಿಕಾರಿ ಎಫ್ ಜಿ.ಚಿನ್ನನ್ನವರ, ಮೂಡಲಗಿ ಸಿಡಿಪಿಒ ಯಲ್ಲಪ್ಪ ಗದಾಡಿ, ಸರ್ಕಾರಿ ನ್ಯಾಯವಾಧಿ ಛಾಯಾ ಬೇಡಿಕಿಹಾಳ, ಪಿಎಸ್‍ಐ ಎಚ್ ವೈ ಬಾಲದಂಡಿ ಹಾಗೂ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು