Breaking News
Home / Recent Posts / ಸರ್ಕಾರ ವಿರುದ್ದ ಕೂಡಲ ಸಂಗದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಅಸಮಾಧನ

ಸರ್ಕಾರ ವಿರುದ್ದ ಕೂಡಲ ಸಂಗದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಅಸಮಾಧನ

Spread the love

ಮೂಡಲಗಿ : ಶುಕ್ರವಾರದಂದು ಸರ್ವ ಪಕ್ಷಗಳ ಸಭೆ ಕರೆದು ಜನಸಂಖ್ಯೆ ಆಧಾರದ ಮೇಲೆ ಎಸ್ಸಿ-ಎಸ್ಟಿ ಸಮಾಜದ ಮೀಸಲಾತಿ ಹೆಚ್ಚಳ ಮಾಡಿದರುವುದು ಸಂತಸವಾದರು, ಆ ಸಭೆಯಲ್ಲಿ ಪಂಚಮಸಾಲಿಗಳ ಮೀಸಲಾತಿ ಬಗ್ಗೆ ಚರ್ಚಿಸಿದರೇ ಮೀಸಲಾತಿಗಾಗಿ ಹೋರಾಟ ಮಾಡಿದ ಸಮುದಾಯಗಳಿಗೆ ನೆಮ್ಮದಿ ಸಿಗುತ್ತಿದ್ದು ಎಂದು ಸರ್ಕಾರ ವಿರುದ್ದ ಕೂಡಲ ಸಂಗದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಅಸಮಾಧನವನ್ನು ಹೋರ ಹಾಕಿದರು.
ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಆಯೋಜಿಸಲಾದ ಪಂಚಮಸಾಲಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಸಮಾಜದ ಕುರಿತು ಚರ್ಚೆ ಮಾಡಿದಕ್ಕೆ ನಮಗೆ ಯಾವುದೇ ಬೇಜಾರಿಲ್ಲ. ಆದರೆ ಪಂಚಮಸಾಲಿ ಸಮುದಾಯದ ಹೋರಾಟದ ಬಗ್ಗೆ ಚರ್ಚೆ ಮಾಡಬೇಕಿತ್ತು, ಚರ್ಚೆ ಆಗದಿರುವುದು ಬೇಸರದ ಸಂಗತಿಯಾಗಿದೆ. ಅ.21ಕ್ಕೆ ಹುಕ್ಕೇರಿಯಲ್ಲಿ ಜಿಲ್ಲಾ ಮಟ್ಟದ ಬಹೃತ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಸಮಾಜದ ನಿರ್ಧಾರವನ್ನು ನಾವು ಪ್ರಕಟ ಮಾಡುತ್ತೇವೆ. ಸರ್ಕಾರ ಪಂಚಮಸಾಲಿ ಸಮುದಾಯದ ಮೀಸಲಾತಿ ಬಗ್ಗೆ ಅಂತಿಮ ತೀರ್ಮಾನ ಮಾಡಬೇಕು, ಒಂದು ವೇಳೆ ತೀರ್ಮಾನ ತೆಗೆದುಕೊಳ್ಳದಿದ್ದರೆ ನವಂಬರ ಎರಡನೇ ವಾರದಲ್ಲಿ 25 ಲಕ್ಷ ಪಂಚಮಸಾಲಿಗಳೊಂದಿಗೆ ಬೆಂಗಳೂರಿಗೆ ಬಂದು ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ತಿಂಗಳು 23ರಂದು ಕಿತ್ತೂರ ರಾಣಿ ಚೆನ್ನಮ್ಮನ ಜಂಯತಿಯನ್ನು ರಾಜ್ಯಾದಂತ್ಯ ಸರ್ಕಾರದಿಂದ ಆಚರಣೆ ಮಾಡಲಾಗುತ್ತದೆ, ಅಷ್ಟರ ಒಳಗಾಗಿ ಸರ್ವ ಪಕ್ಷಗಳ ಸಭೆ ಕರೆದು ಸಿಎಂ ಬೊಮ್ಮಾಯಿಯವರು ಒಂದು ನಿರ್ಧಾರಕ್ಕೆ ಬರಬೇಕು. ಇಲ್ಲವಾದರೇ ಪಂಚಮಸಾಲಿಗಳು ಸರ್ಕಾರದಿಂದ ಮಾಡುವಂತ ಜಂಯತಿಗಳನ್ನ ಈ ವರ್ಷ ಬಹಿಷ್ಕಾರ ಹಾಕುವ ಕಾಲ ಬರಬಹುದು ಹಾಗಾಗಿ ಕೂಡಲೇ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡು ಹಾಗೂ ಪುಲಗಡ್ಡಿಯ ಗ್ರಾಮದ ಪಂಚಮಸಾಲಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ