ದಾಲ್ಮಿಯಾ ಭಾರತ ಫೌಂಢೇಶನ್‍ದಿಂದ ಶುದ್ಧ ನೀರಿನ ಘಟಕ ಲೋಕಾರ್ಪಣೆ
ಮೂಡಲಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೋಳ್ಳುವದು ಪ್ರಥಮ ಆದ್ಯತೆ ನೀಡ ಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದಾಲ್ಮಿಯಾ ಸಿಮೆಂಟ ಕಾರ್ಖಾನೆ ನಿರ್ಮಿಸಿರು ಶುದ್ಧ ಕುಡಿಯುವ ನೀರಿನ ಘಟಕದ ಸದ್ಬಳಕೆ ಮಾಡಿಕೋಳ್ಳಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿಯ ಅವರು ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದ ಜನತಾ ಪ್ಲಾಟದಲ್ಲಿ ದಾಲ್ಮಿಯಾ ಭಾರತ ಫೌಂಡೇಶನದ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯವರು ನೂತನ ನಿರ್ಮಿಸಿದ ಒಂದು ಸಾವಿರ ಲಿಟರ ರ್ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ದಾಲ್ಮಿಯಾ ಸಿಂಮೆಟ ಕಾರ್ಖಾನೆಯ ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ಅಧಿಕಾರಿ ಮಾಯಾಂಕಕುಮಾರ ಪಠಾಕ್ ಮಾತನಾಡಿ, ಯಾದವಾಡ ಗ್ರಾಮಸ್ಥರು ಒಂದೆ ಮನೆಯ ಸದಸ್ಯರಂತೆ ಇದ್ದುಇದೆರಿತಿಯಲ್ಲಿ ಒಬ್ಬರಿಗೋಬ್ಬರು ಅನುನ್ಯರವಾಗಿ ಶುದ್ಧ ಕುಡಿನೀರಿನ ಘಟಕವನ್ನು ಸ್ಥಾಪಿಸಲ್ಲಾಗಿದೆ ಎಂದ ಅವರು ನೀರನ್ನು ವ್ಯರ್ಥವಾಗಿಸದೆ ನೀರನ್ನು ಸರಿಯಾದ ರೀತಿಯಲ್ಲಿ ಬಳಸಿ ಉಳಿಸುವಂತೆ ಮನವಿಮಾಡಿದರು.
ಕಾರ್ಖಾನೆಯ ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕ ಉಮೇಶ ದೇಸಾಯಿ ಮಾತನಾಡಿ, ಕಾರ್ಖಾನೆಯ ಸೌಲಭ್ಯ ಮತ್ತು ಯೋಜನೆಯ ಬಗ್ಗೆ ವಿವರಿಸಿದರು.
ಈ ಸಂಧರ್ಭದಲ್ಲಿ ಕಾರ್ಖಾನಿಯ ಅಧಿಕಾರಿಗಳು ಗ್ರಾಮ ಪಂಚಾಯತ ಸದಸ್ಯರು ಮತ್ತಿತರರು ಇದ್ದರು.