Breaking News
Home / Recent Posts / ಕುಟುಂಬದಲ್ಲಿ ಸತಿ-ಪತಿಗಳ ನಡುವೆ ಕಲಹಗಳು ಆಗುವುದು ಸಾಮಾನ್ಯ, ಕಲಹದಿಂದ ಪುರುಷರು ದುಶ್ಚಟಗಳಿಗೆ ದಾಸರಾಗಬಾರದು- ಕ್ಷೇತ್ರಶೀಕ್ಷಣಾಧಿಕಾರಿ ಅಜೀತ ಮನ್ನಿಕೇರಿ

ಕುಟುಂಬದಲ್ಲಿ ಸತಿ-ಪತಿಗಳ ನಡುವೆ ಕಲಹಗಳು ಆಗುವುದು ಸಾಮಾನ್ಯ, ಕಲಹದಿಂದ ಪುರುಷರು ದುಶ್ಚಟಗಳಿಗೆ ದಾಸರಾಗಬಾರದು- ಕ್ಷೇತ್ರಶೀಕ್ಷಣಾಧಿಕಾರಿ ಅಜೀತ ಮನ್ನಿಕೇರಿ

Spread the love

ಮೂಡಲಗಿ: ಧರ್ಮಸ್ಥಳದ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳನ್ನು ಪ್ರತಿಯಬ್ಬರು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕೆಂದು ಎಂದು ಮೂಡಲಗಿ ಕ್ಷೇತ್ರಶೀಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು

ಅವರು ಪಟ್ಟಣದ ಶ್ರೀ ಮಹಾಲಕ್ಷ್ಮೀ ಅರ್ಬನ್ ಸೊಸಾಯಿಟಿಯ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಅಖಿಲ್ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನಗಳೊಂದಿಗೆ ಜರುಗಿದ ಗಾಂಧಿ ಸ್ಮøತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಟುಂಬದಲ್ಲಿ ಸತಿ ಮತ್ತು ಪತಿಗಳ ನಡುವೆ ಕಲಹಗಳು ಆಗುವುದು ಸಾಮಾನ್ಯ, ಕಲಹದಿಂದ ಪುರುಷರು ದುಶ್ಚಟಗಳಿಗೆ ದಾಸರಾಗಬಾರದು ಎಂದರು

ಯೋಜನೆಯ ಬೆಳಗಾವಿ-4 ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಅವರು ನವಜೀವನ ಸಮಿತಿ ಸದಸ್ಯರನ್ನು ಗೌರವಿಸಿ ಸಮಾಜದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು ಉತ್ತಮ ದೇಶವನ್ನು ನಿರ್ಮಾಣ ಮಾಡಬೇಕೆಂದ ಅವರು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಕನಸಿನ ಕುಸಾದ ಯೋಜನೆಯು ಇಂದು ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿದೆ. ಗ್ರಾಮಾಭಿವೃದ್ಧಿಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ. ಗಾಂಧೀಜಿಯವರ ಪರಿಕಲ್ಪನೆ ಈ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ, ಕೃಷಿ ಮೇಳ, ತರಬೇತಿ, ಮಾನವ ಸಂಪನ್ಮೂಲ ಬಳಕೆ ಮುಂತಾದ ವಿಷಯಗಳು ಯೋಜನೆಯು ಒಳಗೊಂಡಿದೆ ಎಂದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಶಿವಲಿಂಗಪ್ಪ ಪಾಟೀಲ್ ಮಾತನಾಡಿ, ಸತ್ಯವನ್ನು ಅರಿತವರು ದುಶ್ಚಟಗಳ ಬಗ್ಗೆ ಯಾವುದೇ ಆಸೆಯನ್ನು ಹೊಂದಿರಬಾರದು, ಮಕ್ಕಳು ಮನೆಯ ಬಗ್ಗೆ ಅವರು ಹೊಂದಿರುವ ಕಾಳಜಿಯ ಬಗ್ಗೆ ಅವರ ಹಾವಭಾವದ ಬಗ್ಗೆ ಪಾಲಕರು ನಿಗಾ ವಹಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ ಮಹಾಲಕ್ಷ್ಮಿ ಸೊಸಾಯಿಟಿಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರ ಮಾಡದೆ ಇರುವ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ ಎಂದರು.
ಯೋಜನೆಯ ಜನಜಾಗೃತಿ ವೇದಿಕೆಯ ಸದಸ್ಯ ಭರಮಣ್ಣ ಉಪ್ಪಾರ ಮಾತನಾಡಿ, ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಸಮಾಜದಲ್ಲಿ ಸಾವಿರಾರು ಕುಟುಂಬಗಳಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಹಾಯವನ್ನು ಮಾಡುತ್ತಿದ್ದಾರೆ, ನವಜೀವನ ಸಮಿತಿ ಸದಸ್ಯರು ಕೂಡ ಯಾವುದೇ ಆಮಿಷಗಳಿಲ್ಲದೆ ಯೋಜನೆಯ ಕಾರ್ಯಕ್ರಮಗಳಲ್ಲಿ ಸೇವೆ ಮಾಡಲು ಸಿದ್ದರಿದ್ದೇವೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ಸದಸ್ಯರಾದ ಶಿವಶಂಕರ ಖಾನಾಪುರ, ಶ್ರೀಶೈಲ ಡವಳೇಶ್ವರ್, ಮಲ್ಲಿಕಾರ್ಜುನ ಕಟ್ಟಿ ಮತ್ತು ಮಣಿಕಂಠ ನಾವಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಲಯದ ಮೇಲ್ವಿಚಾರಕರಾದ ಕಾಮಾಕ್ಷಿ ನಾಯ್ಕ್, ಶ್ರುತಿ ಕೊಳ್ಳಿ, ಹನುಮೇಶ್. ಬಿ. ಪ್ರಗತಿಬಂಧು ಮತ್ತು ಸ್ವಸಹಾಯ ತಂಡದ ಸದಸ್ಯರು, ಮೂಡಲಗಿ ಪಟ್ಟಣದ ವಲಯದ ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಯೋಜನೆಯ ತಾಲೂಕಿನ ಯೋಜನಾಧಿಕಾರಿ ರಾಜು ನಾಯಕ್ ಸ್ವಾಗತಿಸಿದರು, ಲೆಕ್ಕ ಪರಿಶೋಧಕ ರಾಮ ಮೂಕರಿ ನಿರೂಪಿಸಿದರು, ಕೃಷಿ ಮೇಲ್ವಿಚಾರಕ ಈರಣ್ಣ ಅಂಗಡಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ