Breaking News
Home / Recent Posts / ಸಹಕಾರಿ ಸಂಘಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿವೆ

ಸಹಕಾರಿ ಸಂಘಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿವೆ

Spread the love

ಮೂಡಲಗಿ: ಸಹಕಾರಿ ಸಂಘಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿವೆ ಹಾಗೂ ಸಹಕಾರಿ ಸಂಘಗಳು ಗ್ರಾಹಕರಿಗೆ ನೀಡುತ್ತಿರುವ ಸೇವೆ ಮತ್ತು ಕಾರ್ಯದಕ್ಷತೆ ಪ್ರಶಂಸನೀಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಸೆ.14 ರಂದು ಮೂಡಲಗಿ ನಗರದ ಶ್ರೀ ಅನ್ನಪೂರ್ಣೇಶ್ವರಿ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸಹಕಾರ ಕ್ಷೇತ್ರ ಗ್ರಾಮೀಣ ಭಾಗದ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವ ಕೇಂದ್ರಗಳಾಗಿವೆ ಆ ಮೂಲಕ ಗ್ರಾಮೀಣ ಭಾಗದ ಆರ್ಥಿಕ ಅಭ್ಯೋದಯಕ್ಕೆ ಅನನ್ಯ ಕೊಡುಗೆ ನೀಡಿವೆ. ಸಹಕಾರಿ ಸಂಘಗಳ ಆಡಳಿತ ಮಂಡಳಿಗಳು ದೂರದೃಷ್ಠಿ ಹಾಗೂ ಪ್ರಾಮಾಣಿಕ ದಕ್ಷ, ಆಡಳಿತ ವ್ಯವಸ್ಥೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಒಳ್ಳೆಯ ಸೇವೆ ನೀಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಧರ್ಮಪೀಠ, ಕೂಡಲಸಂಗಮದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಗಳು. ಮೂಡಲಗಿಯ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಭೋಧ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ನಿರ್ದೇಶಕರಾದ ಬಸವರಾಜ್ ಪಾಟೀಲ್, ಚಿನ್ನಪ್ಪ ಸಿ ಬಳಿಗಾರ, ಈರಪ್ಪ ಶಿ ಮುನ್ಯಾಳ, ಈರಪ್ಪ ವೆಂ ಭಾಗೋಜಿ, ಹೊಳೆಪ್ಪ ಬಾ ಶಿವಾಪೂರ, ಯಲ್ಲಪ್ಪ ನಿಂ ಗೋಕಾಕ, ಪ್ರಕಾಶ್ ಮಾದರ್, ಡಾ. ಬಿ ಎಂ ಪಾಲಬಾಂವಿ, ಈರಪ್ಪ ಡವಳೇಶ್ವರ, ಪಾಂಡು ಮಹೇಂದ್ರಕರ್, ಕುಮಾರ್ ಗಿರಡ್ಡಿ, ಈಶ್ವರ್ ಮುರಗೋಡ್, ಮಹಾನಿಂಗ್ ಒಂಟಗೂಡೆ, ಮಹಾದೇವ ಶಕ್ಕಿ, ಶಿವಬೋದ ಬೆಳಗಲಿ, ಜಗದೀಶ್ ತೇಲಿ, ಚೇತನ ಹೊಸಕೋಟಿ, ಪ್ರಶಾಂತ ನಿಡಗುಂದಿ, ಸಂಗಪ್ಪ ಕಳ್ಳಿಗುದ್ದಿ, ಕಲ್ಮೇಶ್ ಗೋಕಾಕ, ಪಿ.ಎಸ್.ಐ ಹಾಲಪ್ಪ ಬಾಲದಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ