Breaking News
Home / Recent Posts / ಅ.26 ರಿಂದ ಢವಳೇಶ್ವರದಲ್ಲಿ ಬೀರಸಿದ್ಧೇಶ್ವರ ಜಾತ್ರೆ

ಅ.26 ರಿಂದ ಢವಳೇಶ್ವರದಲ್ಲಿ ಬೀರಸಿದ್ಧೇಶ್ವರ ಜಾತ್ರೆ

Spread the love

ಅ.26 ರಿಂದ ಢವಳೇಶ್ವರದಲ್ಲಿ ಬೀರಸಿದ್ಧೇಶ್ವರ ಜಾತ್ರೆ

ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಅ.26 ರಿಂದ 28 ರವರಿಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೋಂದಿಗೆ ಶ್ರೀ ಬೀರಸಿದ್ಧೇಶ್ವರ ಜಾತ್ರಾಮಹೋತ್ಸವ ಜರುಗಲಿದೆ ಎಚಿದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.26 ರಂದು ಜಾತ್ರಾಮಹೋತ್ಸವ ನಿಮಿತ್ಯ ವ್ಮಧ್ಯಾಹ್ನ 2ಕ್ಕೆ ಸರಕಾರಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಾಲ್ಕು ಹಲ್ಲಿನ, ಎರಡು ಹಲ್ಲಿನ ಮತ್ತು ಹಾಲು ಹಲ್ಲಿನ ಟಗರಿನ ಕಾಳಗ ಸ್ಪರ್ಧೆಗಳು ಜರುಗಲ್ಲಿವೆ, ಅಂದು ಸಂಜೆ 5ಕ್ಕೆ ವಿವಿಧ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳು ಗ್ರಾಮಕ್ಕೆ ಆಗಮಿಸುವವು, ರಾತ್ರಿ 8ಕ್ಕೆ ಮಹಾಪ್ರಸಾದ ಮತ್ತು 10ಕ್ಕೆ ಹರದೇಶಿ ಮತ್ತು ನಾಗೇಶಿ ಡೊಳ್ಳಿನ ಪದಗಳು ಜರುಗಲಿವೆ.
ಅ.27 ರಂದು ಮುಂಜಾನೆ 9ಕ್ಕೆ ಡೊಳ್ಳು, ವಾದ್ಯಮೇಳ ಮತ್ತು ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಘಟಪ್ರಭಾ ನದಿಗೆ ಹೋಗಿ ತಲುಪತ್ತದೆ, ನಂತರ ಮುತೈದೆಯರಿಂದ ಗಂಗಾಮಾತೆಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವ್ಯದು. ಮಧ್ಯಾಹ್ನ 12ಕ್ಕೆ ಮಹಾಪ್ರಸಾದ ಜರುಗುವ್ಯದು. ಅಂದು ರಾತ್ರಿ 10ಕ್ಕೆ ಗ್ರಾಮ ಪಂಚಾಯತಿ ಗಂಗವ್ವ ಸಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಅ.28 ರಂದು ಮುಂಜಾನೆ 9ಕ್ಕೆ ಶ್ರೀ ಬೀರಸಿದ್ಧೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಬಂಡಾರ ವಡೆಯುವ ಕಾರ್ಯಕ್ರಮ ಜರುಗುವುದು ಎಂದು ರಂಗಪ್ಪ ಹೊನಕುಪ್ಪಿ ತಿಳಿಸಿದ್ದಾರೆ.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ