ಮೂಡಲಗಿ: ಕಿತ್ತೂರು ಚೆನ್ನಮ್ಮಾಜಿ ಉತ್ಸವದಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಕಣ್ಮನ ಸೆಳೆಯುವಂತ ವೇಷಭೂಷಣಗಳು ಆಗಮಿಸಿದವು, ಮೂಡಲಗಿ ತಾಲೂಕಾಡಳಿದಿಂದ ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಶಿಬಿರಾರ್ಥಿಗಳಿಂದ ತಾಲೂಕಿನ ವಿಷೇಶತೆಯನ್ನು ತೋರಿಸುವಂತ ವೇಷಭೂಷಣವು ಕೂಡಾ ಭಾಗವಹಿಸಿತ್ತು.
ಪಾರಿಜಾತದ ಪಿತಾಮಹ ಕುಲಗೋಡ ಗ್ರಾಮದ ತಮ್ಮಣ್ಣ, ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ, ಆನಂದ ಕಂದ ಬೆಟಗೇರಿ ಕೃಷ್ಣಶರ್ಮಾ ಕವಿ, ಚತುರ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಮಹಾತ್ಮರ ವೇಷಭೂಷಣಗಳೊಂದಿಗೆ ಭಾಗವಹಿಸಿದರು. ಕಿತ್ತೂರು ಉತ್ಸವದಲ್ಲಿ ತಾಲೂಕಿನ ವಿಶೇಷತೆಯ ಬಗ್ಗೆ ವೇಷಭೂಷಣಗಳನ್ನು ಮೂಲಕ ತಾಲೂಕಿನ ಹಿರಿಮ್ಮೆಯನ್ನು ಹೆಚ್ಚಿಸುವಲ್ಲ್ಲಿ ತರಬೇತಿ ಕೇಂದ್ರ ಶಿಬಿರಾರ್ಥಿಗಳನ್ನು ತಾಲೂಕಿನ ಸಾರ್ವಜನಿಕರು ಶ್ಲಾಘನಿಸಿದ್ದಾರೆ.
ಈ ವೇಷಭೂಷಣಗಳನ್ಮ್ನ ಅಲಂಕರಿಸುವಲ್ಲಿ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಹಾಗೂ ಚಿತ್ರಕಲಾ ಶಿಕ್ಷಕ ಸುಭಾಷ ಕುರಣಿ ಪಾತ್ರ ವಹಿಸಿದರು.