Breaking News
Home / ತಾಲ್ಲೂಕು / ಹಳ್ಳೂರ ಗ್ರಾಮದಲ್ಲಿ   ಮಾಸ್ಕ ವಿತರಣೆ

ಹಳ್ಳೂರ ಗ್ರಾಮದಲ್ಲಿ   ಮಾಸ್ಕ ವಿತರಣೆ

Spread the love

ಮೂಡಲಗಿ: ಜನರು ಸ್ವಯಂ ಪ್ರೇರಿತರಾಗಿ ಕೊರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಬೇಕು. ಆರೋಗ್ಯ, ಪೊಲೀಸ್, ಅಂಗನವಾಡಿ, ಆಶಾ ಕಾರ್ಯಕರ್ತೆ, ಗ್ರಾಮ ಪಂಚಾಯತಯವರೊಂದಿಗೆ ಸಹಕಾರ ನೀಡಬೇಕು ಎಂದು ಅರಭಾಂವಿ ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಮಾಸ್ಕ ವಿತರಿಸಿ ಜನಪ್ರತಿನಿಧಿಗಳಿಗೆ ಮುಖಂಡರಿಗೆ ತಿಳಿಸಿದರು.
ಸಮೀಪದ ಹಳ್ಳೂರ ಗ್ರಾಮದಲ್ಲಿ ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ವತಿಯಿಂದ ಕೊಡಲ್ಪಟ್ಟ ಮಾಸ್ಕ ವಿತರಿಸಿ ಮಾತನಾಡಿದರು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕರೋನಾ ಮಹಾಮಾರಿಗೆ ತಕ್ಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮ ಪಂಚಾಯತ, ಪೊಲೀಸ್, ಆರೋಗ್ಯ ಇಲಾಖೆಯವರು ನೀಡುವ ಪ್ರತಿಯೊಂದು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಅರಭಾಂವಿ ಶಾಸಕರು ಮೂಡಲಗಿ ತಾಲೂಕಿಗೆ 2.5 ಲಕ್ಷ ಮಾಸ್ಕ್ ನೀಡುತ್ತಿದ್ದು ಹಳ್ಳೂರ ಗ್ರಾಮಕ್ಕೆ 6 ಸಾವಿರ ಮಾಸ್ಕ್ ವಿತರಿಸಿದ್ದು ಗ್ರಾಮಸ್ಥರು ಉಪಯೋಗ ಪಡೆದುಕೊಳ್ಳಬೇಕು ಎಂದರು.
ಕೊರೋನಾ ವೈರಸ್ ನಮ್ಮ ಜಿಲ್ಲೆಯ ವ್ಯಾಪ್ತಿ ಹೆಚ್ಚಾಗಿ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆ ಗ್ರಾಮದ ಜನರು ಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು, ತಮ್ಮ ತಮ್ಮ ಜೀವನ ಹಾಗೂ ತಮ್ಮ ಕುಟುಂಬ ಸಲುವಾಗಿ ಮನೆ ಬಿಟ್ಟು ಹೊರಗಡೆ ಬರದಂತೆ ಇದ್ದರೆ ಇಡೀ ಗ್ರಾಮದ ಜನತೆಯ ಜೀವ ಉಳಿಸಿದಂತಾಗುವದು. ಶಾಸಕರು ತಮ್ಮಯ ಎಲ್ಲ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದು, ಅಗತ್ಯ ಸಹಕಾರ ಪಡದುಕೊಳ್ಳ ಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಬಿಇಒ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ವೃದ್ದರು ಚಿಕ್ಕ ಮಕ್ಕಳು ಹಾಗೂ ಅಸಮರ್ಥರು ಮುಂಜಾಗೃತ ಕ್ರಮವಾಗಿ ಅಗತ್ಯ ಆರೋಗ್ಯ ಇಲಾಖೆಯಿಂದ ನೀಡುವ ನಿಯಮಾವಳಿಗಳನ್ನು ಪಾಲಿಸಬೇಕು. ಅಗತ್ಯ ಸಹಾಯ ಬೇಕಾದ್ದಲ್ಲಿ ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸಬೇಕು. ಸಾರ್ವಜನಿಕರು ಸರಕಾರ ಸೂಚಿಸುವ ನಿಯಮಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಶಾಸಕರು ನೀಡಿರುವ ಮಾಸ್ಕ್‍ಗಳನ್ನು ಸಾರ್ವಜನಿಕರಿಗೆ ವಿತರಿಸಿ ಮುಂಜಾಗೃತ ಕ್ರಮಗಳನ್ನು ತಿಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿ ನಿರ್ದೇಶಕ ಭೀಮಶಿ ಮಗದುಮ್, ಗ್ರಾಪಂ ಸದಸ್ಯರಾದ ಲಕ್ಷ್ಮಣ ಕತ್ತಿ, ಬಾಹುಬಲಿ ಸಪ್ತಸಾಗರ, ಸದಾಶಿವ ಮಾವರಕರ, ಸಂಗಪ್ಪ ಪಟ್ಟಣಶೆಟ್ಟಿ, ಮಲ್ಲಪ್ಪ ಹೊಸಟ್ಟಿ, ತುಕಾರಾಮ ಸನದಿ, ಈರಪ್ಪ ಪಾಲಬಾಂವಿ, ಭೀಮಪ್ಪ ಹೊಸಟ್ಟಿ, ಸದಾಶಿವ ಮಾರಕರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್ ವೈ ತಾಳಿಕೋಟಿ, ಗ್ರಾಪಂ ಸಿಬ್ಬಂದಿಗಳಾದ ನಾಗಪ್ಪ ಮೋರೆ, ಮಂಜುನಾಥ ಕೊಹಳ್ಳಿ, ಕಿಶೋರ ಗಣಚಾರಿ, ಮಹಾತೇಂಶ ಸಂತಿ ಗ್ರಾಮದ ಬಸಪ್ಪ ಸಂತಿ, ಭೀಮಪ್ಪ ಡಬ್ಬನ್ನವರ, ಅಡಿವೇಪ್ಪ ಪಾಲಬಾಂವಿ, ಚೆನ್ನಪ್ಪ ಬೆಳಗಲಿ, ಅಪ್ಪಯ್ಯ ರಡ್ರಟ್ಟಿ, ಹಣಮಂತ ತೇರದಾಳ, ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love ‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ