ಪತ್ರಕರ್ತರ ಸಂಘದ ಕಛೇರಿಯಲ್ಲಿ ರಾಜ್ಯೋತ್ಸ ಆಚರಣೆ
ಮೂಡಲಗಿ: ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ
ಮೂಡಲಗಿ ತಾಲೂಕಾ ಘಟಕ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆಜೀತ ಮನ್ನಿಕೇರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಜರುಗಿತು.
ತಹಶೀಲ್ದಾರ್ ಡಿ. ಜಿ. ಮಹಾತ್, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ತಾಪಂ ಎಓ ಎಫ್.ಎಸ್. ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಡಾ. ಭಾರತಿ ಕೋಣಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ. ಬಿ.ಪಾಟೀಲ, ಚಿದಾನಂದ ಮುಗಳಖೋಡ್, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಜಯಾನಂದ ಪಾಟೀಲ, ರವಿ ಸಣ್ಣಕ್ಕಿ, ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮತ್ತು ಸದಸ್ಯರಾದ ಬಿ.ವಾಯ್. ಶಿವಾಪುರ, ಬಿ.ಆರ್.ತರಕಾರ, ಎ. ಎಚ್. ಒಂಟಗೋಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕಾ ಘಟಕ ಅಧ್ಯಕ್ಷ ಕೃಷ್ಣಪ್ಪ ಗಿರೆಣ್ಣವರ, ಉಪಾಧ್ಯಕ್ಷರಾದ ಲಿಂಗಪ್ಪ ಗಾಡವಿ, ಶಿವಾನಂದ ಮರಾಠೆ, ಕಾರ್ಯದರ್ಶಿ ಅಲ್ತಾಪ್ಪ್ ಹವಾಲ್ದಾರ, ಪ್ರಧಾನ ಕಾರ್ಯದರ್ಶಿ ಮಲ್ಲು ಬೊಳನ್ನವರ, ಸದಸ್ಯರಾದ ಸುಭಾಸ ಗಡ್ಲಮನಿ, ಹನಮಂತ ಸತರಡ್ಡಿ, ಕನ್ನಡ ಅಭಿಮಾನಿಗಳು ಭಾಗವಹಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಬಿ.ಇ.ಒ ಅಜೀತ್ ಮನ್ನಿಕೇರಿ ಅವರ ಹುಟ್ಟುಹಬ್ಬದ ನಿಮಿತ್ಯ ಕೇಕ್ ಕಟ್ಟ ಮಾಡುವ ಮುಖಾಂತರ ಹುಟ್ಟುಹಬ್ಬವನ್ನು ಆಚರಿಸಿ ಶುಭ ಕೋರಿದರು. ಪತ್ರಕರ್ತರ ಸಂಘದದಿಂದ ತಹಶೀಲ್ದಾರ್ ಡಿ. ಜಿ. ಮಹಾತ್, ತಾ.ಪಂ ಎಓ ಎಫ್.ಎಸ್.ಚಿನ್ನನವರ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಅವರನ್ನು ಸತ್ಕರಿಸಿ ಗೌರವಿಸಲ್ಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ತಹಶೀಲ್ದಾರ್ ಡಿ. ಜಿ. ಮಹಾತ್, ಬಿ.ಇ.ಒ ಅಜೀತ್ ಮನ್ನಿಕೇರಿ ಅವರು ರಾಜ್ಯೋತ್ಸವದ ಕುರಿತು ಮಾತನಾಡಿದರು