ಮುಡಲಗಿ: ಕವಿಯು ಮುಕ್ತ ಮನಸ್ಸಿನಿಂದ ಸೃಷ್ಠಿಯ ಸೌಂದರ್ಯದ ಭಾವನೆಯ ಏಳೆದುಕೊಂಡಾಗ ಮಾತ್ರ ಭಾವಣಾತ್ಮಕಲೋಕದ ವಿಚಾರಗಳು ಅಭಿವ್ಯಕ್ತಗೋಳ್ಳತ್ತವೆ ಎಂದು ಬೆಟಗೇರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಆರ್.ಎಸ್.ಅಳಗುಂಡಿ ಹೇಳಿದರು.
ಅವರು ರವಿವಾರದಂದು ಪಟ್ಟಣದ ಚೈತನ್ಯ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೈತನ್ಯ ಆಶ್ರಮ ವಸತಿ ಶಾಲೆ ಆಶ್ರಯದಲ್ಲಿ ಜರುಗಿದ ಕವಿಗೋಷ್ಠಿ ಹಾಗೂ ಮುನ್ಯಾಳದ ಮಹಾನಿಂಗಪ್ಪ ಅಪ್ಪಣ್ಣ ಮೂಗಳಖೋಡ ಅವರು ರಚಿಸಿದ “ಸಂಪಿಗೆ” ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾವ್ಯ ಕಟ್ಟಿಕೊಂಡ ಮೀಸೆಯಂತೆ ಇರಬಾರದು, ಹುಟ್ಟಿಕೊಂಡ ಮೀಸೆಯಂತೆ ಇರಬೇಕೆಂದರು.
ಕಸಾಪ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ, ಕನ್ನಡ ರಕ್ಷಣೆ ಮಾಡುವಗೋಸ್ಕರ ಈಗಾಗಲೇ ಬಹಳಷ್ಟು ವೈವಿದ್ಯಮಯ ಮತ್ತು ವಿನೂತವಾಗಿ ಸಾಕ್ಕಷ್ಟು ಕಾರ್ಯಕ್ರಮ ಏರ್ಪಡಿಸುತ್ತಿದೆವೆ. ಸಾಹಿತ್ಯ ಜ್ಞಾನ ಎಲ್ಲರಿಗೂ ಸಿಗುವಂತೆ ಮತ್ತು ಎಲೆಮರೆ ಕಾಯಿಯಂತಿರುವ ಯುವ ಬರಹಗಾರರಿಗೆ ಹಾಗೂ ಸಂಗೀತಗಾರರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲ್ಲಿಕೆ ಸಾಹಿತ್ಯ-ಸಂಗೀತ, ಚಿಂತನ-ಮಂಥನ ಕಾರ್ಯಕ್ರಮವನ್ನು ಪ್ರತಿತಿಂಗಳು ಹುಣ್ಣಿಮೆಯದಿನದಂದು ನಡೆಸುತ್ತಿದೆವೆ, ಇಂದು ಕಾವ್ಯಾರ್ಥಿಗಳಿಗೆ ಕಾವ್ಯ ಸಂಶೋಧನೆಗೆ ಮಾಡಲಿಕ್ಕೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದರು
ಕವನ ಸಂಕಲನ ಬಿಡುಗಡೆಗೋಳಿಸಿದ ಹಿರಿಯ ಸಾಹಿತಿ ಬಿ.ಪಿ.ಬಂದಿ ಮಾತನಾಡಿ, ನಿವೃತ್ತ ಶಿಕ್ಷಕ ಮುಗಳಖೋಡ ಅವರ ತಮ್ಮ 83ನೇ ವಯಸ್ಸಿನಲ್ಲಿಯು ಒಳ್ಳೆಯ “ಸಂಪಿಗೆ” ಕೃತಿಯನ್ನು ವೈಜ್ಞಾಣಿಕವಾಗಿ ಬರೆದಿದ್ದಾರೆ, ತಮ್ಮ ಪ್ರಕೃತಿಯ ಸಂಗತಿ ಕುರಿತು ಹತ್ತು ಹಲವಾರು ಸಂಗತಿಯ ಕುರಿತು ಬಹಳಷ್ಟು ಸೋಗಸಾಗಿ ಕವನ ಸಂಕಲವನ್ನು ನಮ್ಮ ಕೈಗೆ ಕೋಡುವ ಮೂಲಕ ಸಾಹಿತ್ಯ ವಲಯಕ್ಕೆ ವಿಶೇಷವಾದ ಶಕ್ತಿ ನೀಡಿದ್ದಾರೆ ಎಂದ ಅವರು ಮುಗಳಖೋಡ ಅವರ ಇನ್ನಷ್ಟು ಕವಿತೆಗಳು ಹೊರಗೆ ಬರಲ್ಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಮಾತನಾಡಿ, ಬರವಣಿಗೆಯಲ್ಲಿ ಸಮಷ್ಠಿ ಪ್ರಜ್ಞೆ ಇರಲಿ, ನಾಡು-ನುಡಿಗೆ ಸ್ಪಂದಿಸಿದ ರಸಗವಳದ ವಿಭಿನ್ನ ಕವಿತೆಗಳು ಮೂಡಿ ಬಂದಿವೆ. ಬರಹಗಾರರಿಗೆ, ಕವಿಗಳಿಗೆ, ಸಾಹಿತಿಗಳಿಗೆ ಸಮಾಜದಲ್ಲಿ ಎನ್ನೋ ಮಾಡಬೇಕೆಂಬ ತುಡಿತವಿರುತ್ತದೆ. ಅಂತವರ ಬಧುಕು ಮಾದರಿಯಾಗಿ ಬದುಕು ಸಾರ್ಥಕವಾಗುತ್ತೆ ಎಂದರು.
“ಸಂಪಿಗೆ” ಕವನ ಸಂಕಲನ ರಚನಕಾರ ಮಹಾನಿಂಗಪ್ಪ ಮೂಗಳಖೋಡ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ಬಿಆರ್‍ಸಿ ಅಧಿಕಾರಿ ವೈ.ಬಿ.ಪಾಟೀಲ, ಚೈತನ್ಯ ಅರ್ಬನ್ ಸೋಸೈಟಿ ಅಧ್ಯಕ್ ಟಿ.ಬಿ.ಕೆಂಚರಡ್ಡಿ, ಡಿ.ಎಸ್.ಗೋಡಿಗೌಡರ, ಶಂಕರ ಗೋಡಿಗೌಡ್ರ ಇದ್ದರು. ಸಮಾರಂಭದಲ್ಲಿ ಚೈತನ್ಯ ಶಾಲೆಯ ಮುಖ್ಯೋಪಾದ್ಯಾಯೆ ಸಂಧ್ಯಾ ಪಾಟೀಲ, ರವಿ ಬರಮಾನಾಯ್ಕ, ಕಸಾಪದ ಬಿ.ವಾಯ್.ಶಿವಾಪೂರ, ಎ.ಎಚ್.ಒಂಟಗೋಡಿ, ವಾಯ್.ಬಿ.ಮಳಲಿ, ಮಹಾವೀರ ಸಲ್ಲಾಗೋಳ, ಶಿವಾನಂದ ಕಿತ್ತೂರ ಮತ್ತಿತರರು ಇದ್ದರು.