Breaking News
Home / Recent Posts / ಕನಕದಾಸರು ಜಗತ್ತು ಕಂಡ ಸರ್ವಶ್ರೇಷ್ಠ ಚಿಂತನಕಾರರು: ಸರ್ವೋತ್ತಮ ಜಾರಕಿಹೊಳಿ

ಕನಕದಾಸರು ಜಗತ್ತು ಕಂಡ ಸರ್ವಶ್ರೇಷ್ಠ ಚಿಂತನಕಾರರು: ಸರ್ವೋತ್ತಮ ಜಾರಕಿಹೊಳಿ

Spread the love

 

ಮೂಡಲಗಿ: ಕನಕದಾಸರು ಜಗತ್ತು ಕಂಡ ಸರ್ವಶ್ರೇಷ್ಠ ಚಿಂತನಕಾರರು ಅಲ್ಲದೇ ಸಮಾಜದ ಅಂಕುಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಪರಿವರ್ತನೆ ಮಾಡಿದ ಹರಿಕಾರರು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಶುಕ್ರವಾರದಂದು ಪಟ್ಟಣದ ಶ್ರೀ ಬೀರಸಿದ್ಧೇಶ್ವರ ದೇವಸ್ಥಾನದಲ್ಲಿ ಮೂಡಲಗಿ ತಾಲೂಕಾ ಕುರುಬ ಸಮಾಜದ ಸಂಘಟನೆಯಿಂದ ಜರುಗಿದ ದಾಸಶ್ರೇಷ್ಠ ಕನಕದಾಸರ 535ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಕ್ತ ಕನಕದಾಸರು ದೈವತ್ವದಲ್ಲಿ ಅಪಾರ ನಂಬಿಕೆಯನ್ನಿಟ್ಟುಕೊಂಡು ನೀಜ ಜೀವನದಲ್ಲಿಯೂ ಆದರ್ಶಪ್ರಾಯ ಜೀವನ ನಡೆಯಿಸಿ ದಾಸ ಸಾಹಿತ್ಯದಲ್ಲಿ ಶ್ರೇಷ್ಠರಾಗಿದ್ದಾರೆ, ಅವರ ಆದರ್ಶಮಯ ಜೀವನ ನಮ್ಮೇಲರಿಗೂ ಸ್ಪೂರ್ತಿದಾಯಕ ಹಾಗೂ ಉತ್ತಮ ವ್ಯಕ್ತಿತ್ವದ ನಿರ್ಮಾಣದಲ್ಲಿ ಸಹಾಯಕವಾಗಿವೆ ಎಂದರು.
ಸಮಾರಂಭದಲ್ಲಿ ಬಿ.ಇ.ಒ ಅಜೀತ ಮನ್ನಿಕೇರಿ ಮಾತನಾಡಿ, ಕನಕದಾಸರು ವಚನ, ಕೀರ್ತನೆ, ಸಾಹಿತ್ಯ ರಚಿಸಿ ತಮ್ಮ ಅಪಾರವಾದ ಭಕ್ತಿಯಿಂದ ಶ್ರೀ ಕೃಷ್ಣ ತಮ್ಮನ್ನು ತಿರುಗಿನೋಡುವಂತೆ ಮಾಡಿದ ಮಹಾನ ಶ್ರೇಷ್ಠದಾಸರಾಗಿದ್ದಾರೆ. ಕನಕದಾಸರ ತತ್ವ ಸಿದ್ಧಾಂತಗಳನ್ನು ಯುವ ಪೀಳಿಗೆಗಳಿಗೆ ತಿಳಿಸಿ ಜೀವನ ಸಾರ್ಥಕತೆ ಪಡಿಸಿಕೊಳ್ಳಬೇಕೆಂದರು.

ಉಪನ್ಯಾಸಕ ವಾಯ್.ಬಿ.ಕಳ್ಳಿಗುದ್ದಿ ಅವರು ಕನಕದಾಸರ ಕುರಿತು ಅವರ ಜೀವನ ಚರಿತ್ರೆ ಮತ್ತು ಅನೇಕ ಘಟನಾವಳಿಗಳನ್ನು ವಿವರಿಸಿದರು.
ಪಿಎಸ್‍ಐ ಎಚ್.ವಾಯ್.ಬಾಲದಂಡಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಜೆಪಿ ಮುಖಂಡ ಪ್ರಕಾಶ ಮಾದರ ಮಾತನಾಡಿದರು,
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ರುದ್ರಪ್ಪ ವಾಲಿ, ತಾಲೂಕಾ ಭೂನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್, ಡಾ.ಭಾರತಿ ಕೋಣಿ, ಕಮಲವ್ವಾ ಕನಶೆಟ್ಟಿ, ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ, ಅಬ್ದುಲ್ ಮಿರ್ಜಾನಾಯ್ಕ, ಜಯಪಾಲ ಪಟ್ಟಣಶೆಟ್ಟಿ, ಕೆ.ಆರ್.ಕೊತ್ತಲ, ಪರಮಾನಂದ ತುಬಾಕಿ, ಹಾಲುಮತ ಸಮಾಜ ಭಾಂದವರು ಮತ್ತಿತರು ಇದ್ದರು.
ಮುತ್ತು ಲಂಗೋಟಿ ಸ್ವಾಗತಿಸಿದರು, ಎಲ್.ಎಲ್.ವ್ಯಾಪಾರಿ ನಿರೂಪಿಸಿದರು, ಸಂತೋಷ ಪಾಟೀಲ ವಂದಿಸಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ