ಸಮಾನ ಹಾಗೂ ಉತ್ತಮ ಶಿಕ್ಷಣ ಎಲ್ಲರ ಹಕ್ಕು- ಅಪೇಕ್ಷಾ ಹೊಸಟ್ಟಿ
ಮೂಡಲಗಿ: ಪಟ್ಟಣದ ಬಿ.ವಿ.ಸೋನವಾಲಕರ ಸಿಬಿಎಸ್‍ಸಿ ಶಾಲೆಯ ವಿದ್ಯಾರ್ಥಿಗಳಿಂದ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಡಿಜಿಟಲ್ ಶಿಕ್ಷಣದ ಮಹತ್ವದ ಕುರಿತು ರವಿವಾರ ಬೀದಿ ನಾಟಕ ನಡೆಸಿದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಅಪೇಕ್ಷಾ ಹೊಸಟ್ಟಿ ಮಾತನಾಡಿ, ಶಿಕ್ಷಣದಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕಿದೆ ಹಾಗೂ ಎಲ್ಲರೂ ತಮ್ಮ ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದಲ್ಲಿ ಅಸಾಧ್ಯವಾದದನ್ನು ಸಾಧಿಸಬಲ್ಲಳು ಎಂದು ಪ್ರತಿಪಾದಿಸಿದರು.
ವಿದ್ಯಾರ್ಥಿಗಳಾದ ಕೇಶವ ಪಾಟೀಲ, ಬಸಪ್ಪ ಬಳಿಗಾರ್, ಭೂಮಿಕಾ ತುಕ್ಕನ್ನವರ್, ಭಾಗ್ಯ ಬಾರಿಕರ್ ನಾಟಕವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ವೀರಣ್ಣ ಹೊಸೂರ, ಪ್ರಾಂಶುಪಾಲ ಪ್ರಶಾಂತ್, ಬೆಂಗಳೂರಿನ ಹಿಪೆÇ್ಪೀ ಕ್ಯಾಂಪಸ್ ಸಂಸ್ಥೆಯ ರಾಹುಲ್ ಉತ್ತುರೆ, ವಿಜೇತ್, ಶಿಕ್ಷಕರು ಭಾಗವಹಿಸಿದ್ದರು.
IN MUDALGI Latest Kannada News