Breaking News
Home / Recent Posts / ಘಟಪ್ರಭಾದಲ್ಲಿ ಈರಣ್ಣ ಕಡಾಡಿಯವರ ಮೇಲೆ ಮಾಡಿರುವ ಹಲ್ಲೆಯನ್ನು ಪ್ರಕಾಶ ಮಾದರ

ಘಟಪ್ರಭಾದಲ್ಲಿ ಈರಣ್ಣ ಕಡಾಡಿಯವರ ಮೇಲೆ ಮಾಡಿರುವ ಹಲ್ಲೆಯನ್ನು ಪ್ರಕಾಶ ಮಾದರ

Spread the love

ಮೂಡಲಗಿ: ನಮ್ಮ ದಲಿತ ಮುಖಂಡರು ಘಟಪ್ರಭಾದಲ್ಲಿ ಈರಣ್ಣ ಕಡಾಡಿಯವರ ಮೇಲೆ ಮಾಡಿರುವ ಹಲ್ಲೆಯನ್ನು ದಲಿತ ಮುಖಂಡನಾಗಿ ನಾನು ಕೂಡ ಆ ಘಟನೆಯನ್ನು ಖಂಡಿನೀಸುತ್ತೇನೆ ಎಂದು ಪಟ್ಟಣದ ದಲಿತ ಮುಖಂಡ ಪ್ರಕಾಶ ಮಾದರ ಹೇಳಿದರು.

ರವಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತೀಶ ಜಾರಕಿಹೋಳಿ ನೀಡುವ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿ ತಮ್ಮ ಹೇಳಿಕೆಯನ್ನು ಹಿಂಪಡೆದು ವಿಷಾದ ವ್ಯಕ್ತಡಿಸಿದ್ದಾರೆ. ಆದರೂ ಸಹ ಮುಗ್ಧರಾದ ನಮ್ಮ ದಲಿತ ಮುಖಂಡರು ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ತಡೆಯಬೇಕಿತ್ತು. ಆದರೆ ಕಡಾಡಿಯವರ ಮೇಲೆ ಹಲ್ಲೆ ಮಾಡಿರುವುದರಿಂದ ನಮ್ಮ ದಲಿತ ಮುಖಂಡರು ಮಾಡಿರುವುದು ಖಂಡನೀಯವಾಗಿದೆ ಎಂದರು.

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಈರಣ್ಣ ಕಡಾಡಿಯವರು ಯಾವುದೇ ಕಾರ್ಯಕ್ರಮಗಳಾಗಲ್ಲಿ, ಯಾವುದೇ ವೇದಿಕೆಯಾಗಲ್ಲಿ ಅನ್ಯ ಸಮಾಜದ ವಿರುದ್ದ ಮಾತನಾಡಿದಲ್ಲ. ಆದರೂ ಸಹ ನಮ್ಮ ಮಿತ್ರರಾದ ದಲಿತರು ಕಡಾಡಿಯವರ ಮೇಲೆ ಮಾಡಿರುವ ಹಲ್ಲೆಯನ್ನು ಪಂಚಮಸಾಲಿಗಳು ಎಂದಿಗೂ ಕ್ಷಮೀಸುವುದಿಲ್ಲ. ಆದರಿಂದ ಮುಂದಿನ ದಿನಗಳಲ್ಲಿ ಹೀಗೆ ನಮ್ಮ ಸಮಾಜದ ನಾಯಕರ ಮೇಲೆ ಹಲ್ಲೆಗಳು ನಡೆದರೇ ಪಂಚಮಸಾಲಿಗಳೂ ಕೂಡಾ ರಸ್ತೆಗಿಳಿದ್ದು ಹೋರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಬಹುದು ಆದರಿಂದ ಈ ಘಟನೆಯ ಹಿಂದೆ ಇರುವಂತ ಜನರು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಅಶೋಕ ಬಾಗನ್ನವರ, ಹಾಲಮತ ಸಮಾಜದ ಮುಖಂಡ ಲಕ್ಷ್ಮಣ ಪೂಜೇರಿ, ಉಪ್ಪಾರ ಸಮಾಜದ ಮುಖಂಡ ಸುರೇಶ ಅತಂರಗಟ್ಟಿ, ಶಿವಾನಂದ ಮಗದುಮ್ಮ, ಮಹಾಲಿಂಗ ಒಂಟಗೋಡಿ, ಸದಾಶಿವ ನಿರಲಿ ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ