ಮೂಡಲಗಿ: ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಸಮುದಾಯ ಆರೋಗ್ಯಾಧಿಕಾರಿ ಡಾ.ಸಂಜಯ ಕಬ್ಬೂರ ಮಾತನಾಡಿ, ಗ್ರಾಮಸ್ಥರು ನರೇಗಾ ಯೋಜನೆಯಡಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನ್ನವರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಕಾರದ ಯೋಜನೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಅಡಿವೇಪ್ಪ ಹಾದಿಮನಿ, ಖಾನಪ್ಪ ಹೋಳಕ್ಕರ, ಗ್ರಾಮ ಪಂಚಾಯತ ಸದಸ್ಯರುಮ ಪಿಡಿಒ ಶಿವಾನಂದ ಗುಡಸಿ, ತಾಂತ್ರಿಕ ಸಂಯೋಜಕ ನಾರ್ಗಾಜುನ ಇಳಿಗೇರ, ಆರೋಗ್ಯ ಅಮೃತ ಅಭಿಯಾನದ ತಾಲೂಕು ಸಂಯೋಜಕ ರವಿ ಶಿರೇವ್ವಗೋಳ, ಬಿಎಫ್ ಟಿ ಮಲ್ಲಿಕಾರ್ಜುನ ಮತ್ತು ಗ್ರಾ.ಪಂ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.
