Breaking News
Home / Recent Posts / ಕಾನೂನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ನದಾಫ್

ಕಾನೂನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ನದಾಫ್

Spread the love

ಕಾನೂನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ನದಾಫ್

ಮೂಡಲಗಿ: ವಿದ್ಯಾರ್ಥಿಗಳು ಕಾನೂನು ಅರಿತುಕೊಂಡು ಸಮಾಜದಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಿಗೆ ಒಳಗಾಗದೆ ಉತ್ತಮ ಭವಿಷ್ಯತ್ತನ್ನು ನಿರ್ಮಿಸಿಕೊಳ್ಳಬೇಕು ಎಂದು ಸ್ಥಳೀಯ ಪೆÇಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕರಾದ ಎಮ್.ಬಿ.ನದಾಫ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು..

ಅವರು  ಪಟ್ಟಣದ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ “ಕಾನೂನು ಅರಿವು” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೋಲಿಸ್ ಠಾಣೆಯ ಮುಖ್ಯ ಪೇದೆಯಾದ ನಾಗಪ್ಪ ಒಡೆಯರ್ ಮಾತನಾಡಿ, ಪೋಲಿಸ್ ವ್ಯವಸ್ಥೆ ಹಾಗೂ ಅದರ ಅಧಿಕಾರ ವ್ಯಾಪ್ತಿ ಮತ್ತು ಕಾರ್ಯಗಳ ಕುರಿತು ವಿವರವಾಗಿ ತಿಳಿಸಿದ ಅವರು ಪ್ರಸ್ತುತ ತಂತ್ರಜ್ಞಾನವನ್ನು ಮೊಬೈಲ್, ಇಂಟರ್ನೆಟ್ ಹಾಗೂ ಇತರೆ ಹೊಸ ಹೊಸ ಆವಿμÁ್ಕರಗಳನ್ನು ಬಳಸಿಕೊಂಡು ಯುವಕರು ಹಲವಾರು ಅಪರಾಧಿಕ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು ಎಂದರು. ಯಾವುದಾದರೂ ಅಪರಾಧ ನಡೆಯುವಂತ ಸಂದರ್ಭ ಕಂಡುಬಂದಲ್ಲಿ, ಅದರ ಕುರಿತು ಪೋಲೀಸ್ ಇಲಾಖೆಗೆ ಮಾಹಿತಿ ತಿಳಿಸುವುದರ ಮೂಲಕ ಅಂತಹ ಅಪರಾಧಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು.
ಕಾಲೇಜಿನ ಪ್ರಾಂಶುಪಾಲ ಶಾನೂರಕುಮಾರ ಗಾಣಿಗೇರ ಮಾತನಾಡಿ, ಪೋಲಿಸ್ ಇಲಾಖೆ ಯಾವಾಗಲೂ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹಾಗೂ ಅದರ ರಕ್ಷಣೆಗಾಗಿ ಹಗಲಿರುಳೆನ್ನದೆ ಸೇವೆಯನ್ನು ಸಲ್ಲಿಸಲು ಸಿದ್ಧವಾಗಿರುತ್ತದೆ. ಹೀಗಾಗಿ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಶ್ವಿನಿ ಎಸ್, ರಾಧಾ ಎಮ್. ಎನ್, ರಾಜೇಂದ್ರ ಆಸಂಗಿ, ಅರುಣ ಕಡಾಡಿ, ಎಸ್.ಎಮ್.ನದಾಫ್, ನಂದೀಶ ಕರಾಳೆ, ಚೇತನ್ ರಾಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಭಾರತಿ ದೇವನಗಳ ನಿರೂಪಿಸಿದರು, ಪ್ರೇಮಾ ದೊಡಮನಿ ಪರಿಚಯಿಸಿದರು, ಜ್ಯೋತಿ ನಾಗಣ್ಣವರ ಹಾಗೂ ಶಶಿಕಲಾ ಕೊಡತೆ ಸ್ವಾಗತಿಸಿದರು ಹಾಗೂ ಕಲ್ಪನಾ ಮದ್ಲೂರು ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ