*ಭಕ್ತ ಕನಕದಾಸರು ಕುರಿತು ಕವಿತೆಗಳಿಗೆ ಆಹ್ವಾನ*
ಮೂಡಲಗಿ: “ಸಂತಶಿರೋಮಣಿ” “ಪ್ರಸಿದ್ಧ ಕೀರ್ತನಕಾರ”, ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿ, ಕನ್ನಡ ಸಾರಸ್ವತ ಲೋಕದಲ್ಲಿ ದಾಸ ಸಾಹಿತ್ಯವನ್ನು ವಿಶಿಷ್ಟವಾಗಿ ಸಿರಿವಂತಗೊಳಿಸಿದ “ಭಕ್ತ ಕನಕದಾಸರ” ಕುರಿತು ಬೆಳಗಾವಿ ಜಿಲ್ಲೆಯ ಆಸಕ್ತ ಕವಿಗಳು ಮಾತ್ರ ಒಂದು ಸ್ವ ರಚಿತ ಕವಿತೆಗಳನ್ನು ಆಹ್ವಾನಿಸಲಾಗಿದೆ..
ಒಬ್ಬರು ಒಂದೇ ಕವಿತೆ ರಚಿಸಿರಬೇಕು. ವಯಸ್ಸಿನ ಯಾವುದೇ ಮಿತಿ ಹಾಗೂ ಪ್ರವೇಶ ಶುಲ್ಕ ಇಲ್ಲ. ಕವಿತೆಯನ್ನು ಚೆನ್ನಾಗಿ ಡಿ.ಟಿ.ಪಿ.ಮಾಡಿಸಿರಬೇಕು.ಕವಿತೆಯ ಕೆಳಗೆ ಕವಿಯ ಪೂರ್ಣ ವಿಳಾಸ ಹಾಗೂ ಸಂಪರ್ಕ ವಾಟ್ಸಾಪ್ ಸಂಖ್ಯೆ ಬರೆದಿರಬೇಕು, ೨೦೨೩ ಜನೇವರಿ ೨೫ ರ ಒಳಗಾಗಿ ಕವಿತೆಗಳನ್ನು ಕಳುಹಿಸಬಹುದಾಗಿದೆ. ಆಯ್ದ ಒಳ್ಳೆಯ ಕವಿತೆಗಳನ್ನು ಕ್ರೋಡೀಕರಿಸಿ ಮುಂದೆ ಪುಸ್ತಕ ರೂಪದಲ್ಲಿ ತರುವ ಉದ್ದೇಶ ಇದ್ದು ಕೃತಿ ಲೋಕಾರ್ಪಣೆ ಬಳಿಕ ಆಯ್ದ ಕವಿತೆಗಳನ್ನು ರಚಿಸಿದ ಕವಿಗಳಿಗೆ ಅಂಚೆ ಮೂಲಕ ಕಳುಹಿಸಲಾಗುವುದು. ಕವಿತೆಗಳನ್ನು ಕಳುಹಿಸಬೇಕಾದ ವಿಳಾಸ.. ಪ್ರೊ. ಟಿ.ಎಸ್.ವಂಟಗೂಡಿ. ಕನ್ನಡ ಅಧ್ಯಾಪಕರು ಆರ್.ಡಿ. ಎಸ್.ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯ. ಮೂಡಲಗಿ ಪಿನ್.೫೯೧೩೧೨ ಜಿ.ಬೆಳಗಾವಿ.
ಕಳುಹಿಸಬೇಕೆಂದು “ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಾಹಿತಿ ಶ್ರೀ ಟಿ.ಎಸ್.ವಂಟಗೂಡಿ ಪ್ರಕಟಣೆಯಲ್ಲಿ ತಿಳಿಸಿರುವರು.ಹೆಚ್ಚಿನ ಮಾಹಿತಿಗೆ ಮೊ.೯೭೪೦೬೩೮೫೮೫ ಗೆ ಸಂಪರ್ಕಿಸಲು ಕೋರಲಾಗಿದೆ.