ರಾಷ್ಟ್ರ ಭಕ್ತಿಯ ಜೋತೆಗೆ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಬೇಕು-ಪ್ರಕಾಶ ಮಾದರ
ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಭಜರಂಗದಳದ ಸಂಕೀರ್ತನಾ ಯಾತ್ರೆ ಮತ್ತು ಸತ್ಸಂಗ ಕಾರ್ಯಕ್ರಮಕ್ಕೆ ಇಲ್ಲಿಯ ಶ್ರೀ ಶಿವಬೋಧರಂಗ ಮಠದಲ್ಲಿ ಜರುಗಿದ ಸಂಕೀರ್ತನಾ ಯಾತ್ರೆಗೆ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪ್ರಕಾಶ ಮಾದರ ಚಾಲನೆ ನೀಡಿದರು.
ನಂತರ ಬಸವರಂಗ ಮಂಟಪದಲ್ಲಿ ಜರುಗಿದ ಸತ್ಸಂಗ ಕಾರ್ಯಕ್ರಮಕ್ಕೆ ಇಟನಾಳ ಗ್ರಾಮದ ಸಿದ್ದೇಶ್ವರ ಮಹಾರಾಜರು ಮತ್ತು ತಪಸಿಯ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಹಾಗೂ ಮೂಡಲಗಿ ಪುರಸಭೆ ಸದಸ್ಯ ಈರಪ್ಪ ಮುನ್ಯಾಳ ಚಾಲನೆ ನೀಡಿದರು.
ಪ್ರಕಾಶ ಮಾದರ ಮಾತನಾಡಿ, ಹನುಮ ಮಾಲಾಧಾರಿಗಳು ರಾಷ್ಟ್ರ ಭಕ್ತಿಯ ಜೋತೆಗೆ ಹಿಂದೂ ಧರ್ಮದ ರಕ್ಷಣೆಯನ್ನು ಮಾಡುವ ಕಾರ್ಯ ಮಾಡಿ ಉತ್ತಮ ನಾಗರೀಕರಾಗಬೇಕು ಎಂದರು. ಹನುಮ ಮಾಲಾ ಮಾಲೆಧಾರನ ಮಾಡಿದ ನಂತರ ನಮ್ಮ ಅಂತರ ಮನ ಶುದ್ದ ಮಾಡುತ್ತದೆ. ಯುವಕರಲ್ಲಿ ಒಳ್ಳೆಯ ಆದರ್ಶಗಳನ್ನು ಮರಿಪಾಲನೆ ಮಾಡಲು ಪ್ರೇರಿಪಿಸುತ್ತದೆ. ನಿರ್ವಸನೀಯಾಗಿ, ಬಲಶಾಲಿಯಾಗಿ ಬದುಕಿ ನಮ್ಮ ದೇಶವನ್ನು ನಾವೆ ಸುರಕ್ಷಿತವಾಗಿಡಬೇಕು. ಏಕತೆಯಲ್ಲಿ ಬಲವಿದೆ, ಎಲ್ಲ ಹಿಂದೂಗಳು ಒಗ್ಗೂಡಬೇಕು ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣ ಮಿರಾಳೆ, ಸಿದ್ದಣ್ಣ ತಿಗಡಿ, ಪುರುಷೋತ್ತಮ ಒಡೆಯರ, ಕಲ್ಮೇಶ ಗೋಕಾಕ, ಈರಪ್ಪ ಢವಳೇಶ್ವರ, ಮಹೇಶ ಒಡೆಯರ, ಲಕ್ಷ್ಮಣ ಪುಜೇರ, ಸದಾಶಿವ ನಿಡಗುಂದಿ, ಕುಮಾರ ಗಿರಡ್ಡಿ, ಭೀಮಶಿ ನಾಗನ್ನವರ ಮತ್ತಿತರರು ಉಪಸ್ಥಿತರಿದ್ದರು.