ಮೂಡಲಗಿ: ಮನುಷ್ಯನಿಗೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಬೇಕಾದರೆ ಕ್ರೀಡೆ ಅತ್ಯವಶ್ಯಕವಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ತಾಲೂಕಾ ಪಂಚಾಯತ್ ಮೂಡಲಗಿ ಗ್ರಾಮ ಪಂಚಾಯತ ವಡೇರಹಟ್ಟಿ, ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘ ವಡೇರಹಟ್ಟಿ, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡಲಗಿ ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿದ ಅವರು ಹೆಣ್ಣಿರಲಿ ಗಂಡಿರಲಿ ಮನೆಗೊಂದು ಕ್ರೀಡಾಪಟು ಇರಲಿ. ಆಟದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ದಿನನಿತ್ಯದ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಬೆಳಗಾವಿ ಜಿಲ್ಲಾ ಅಮೆಚ್ಚುಯರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಹುಲ್ ಜಾರಕಿಹೊಳಿ ಮಾತನಾಡಿ ಇನ್ನಿತರ ಕ್ರೀಡೆಗಳಂತೆ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ, ಚಕ್ಕಡಿ ಹಾಗೂ ಕುಸ್ತಿ ಕ್ರೀಡೆಗಳಿಗೂ ಕೂಡ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು, ಸರಕಾರವು ಕೂಡ ಇಂಥ ಗ್ರಾಮೀಣ ಕ್ರೀಡೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗಳನ್ನು ಬೆಳೆಸಲು ಕ್ರೀಡಾ ಇಲಾಖೆ ಹಾಗೂ ನಮ್ಮ ಭಾಗದ ಶಾಸಕರು ಹಾಗೂ ಕೆಎಂಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಕೊಡುಗೆ ಅಪಾರವಾಗಿದೆ ಒಂದು ಕಾರ್ಯಕ್ರಮ ಆಗಬೇಕಾದರೆ ಊರಿನ ಗುರುಹಿರಿಯರ ಸಹಕಾರ ಅತಿ ಅವಶ್ಯಕವಾಗಿದೆ ಎಂದು ಹೇಳಿದರು.ಶಿಕ್ಷಕ ಚಂದ್ರಕಾಂತ ಮೋಟೆಪ್ಪಗೋಳ ಮಾತನಾಡಿ ಈ ವರ್ಷ ತಾಲೂಕಾ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ಜರಗಿದಂತೆ, ಇಲಾಖೆ ಹಾಗೂ ಶಾಸಕರು ಸಹಯೋಗದಿಂದ ಬರುವ ವರ್ಷ ಕೂಡ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟವನ್ನು ನಮ್ಮ ಗ್ರಾಮದ ಹಿರಿಯರ ಸಹಕಾರದಿಂದ ಆಯೋಜಿಸುತ್ತೇವೆ ಎಂದು ಹೇಳಿದರು.ಗ್ರಾಮದ ಮುಖಂಡರಾದ ಅಡಿವೆಪ್ಪ ಹಾದಿಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಹಿರಿಯರಾದ ಮುರಳಿ ವಜ್ರಮಟ್ಟಿ, ಖಾನಪ್ಪ ಹೊಲಕರ, ಲಕ್ಷ್ಮಣ ಮಳ್ಳಿಒಡೆಯರ್, ಪರಸಪ್ಪ ಸಾರಪೂರ, ವಿಠ್ಠಲ್ ಗೀಡೊಜಿ, ಹೊಳೆಪ್ಪ ಹಾದಿಮನಿ, ಗೋಪಾಲ ಕುದರಿ, ಸಿದ್ದಲಿಂಗ ಗೀಡೊಜಿ, ಶಿವಾನಂದ್ ಗುಡಸಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಮಲ್ಲಿಕಾರ್ಜುನ್ ಯಕ್ಷಂಬಿ, ಅದ್ಬುಲ್ ಮಿರ್ಜಾನಾಯಕ, ಬಸವರಾಜ್ ಜಕ್ಕಣ್ಣವರ, ಗೂಳಪ್ಪ ವಿಜಯನಗರ, ರುದ್ರಗೌಡ ಪಾಟೀಲ್, ಬಣಪ್ಪ ಒಡೆಯರ್, ಬಾಲಚಂದ್ರ ಪೂಜೇರಿ, ರೇಬ್ಬೊಜಿ ಮಳ್ಳಿಒಡೆಯರ, ನಾರಾಯಣ ತೋಟಗಿ, ಮಾರುತಿ ಮದ್ರಾಸಿ, ಮಾರುತಿ ಬೆಂಕೆಪ್ಪಗೊಳ, ಸಿದ್ದಪ್ಪ ಪಡಚಿ, ವೆಂಕಣ್ಣ ಕೊಂಕಣಿ, ಶಿವನಗೌಡ ನಾಯಕ, ಬಸು ಬಾಪುಕುರಿ, ಪಾಂಡು ದೊಡಮನಿ, ಪಾಂಡು ಮಣ್ಣಿಕೇರಿ ಸೇರಿದಂತೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಗ್ರಾಮಸ್ಥರು, ಹಾಗೂ ಕಾರ್ಯಕ್ರಮ ಸಂಘಟಕರು ಉಪಸ್ಥಿತರಿದ್ದರು.ರಾಘವೇಂದ್ರ ದೊಡವಾಡ ಸ್ವಾಗತಿಸಿದರು, ಶೈಲಾ ಕೋಕರೆ ನಿರೂಪಿಸಿದರು, ರವಿ ಪೂಜೇರಿ ವಂದಿಸಿದರು.