Breaking News
Home / Recent Posts / ಉಪ ನೋಂದಣಿ ಕಚೇರಿ ಉದ್ಘಾಟನೆ

ಉಪ ನೋಂದಣಿ ಕಚೇರಿ ಉದ್ಘಾಟನೆ

Spread the love

ಉಪ ನೋಂದಣಿ ಕಚೇರಿ ಉದ್ಘಾಟನೆ

ಮೂಡಲಗಿ: ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೂತನ ಉಪ ನೋಂದಣಾಧಿಕಾರಿಗಳ ಕಛೇರಿಯ ಉದ್ಘಾಟನಾ ಸಮಾರಂಭ ಮಂಗಳವಾರ ಡಿ.20 ರಂದು ಸಂಜೆ 5ಗಂಟೆಗೆ ಜರುಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತು ಕಂದಾಯ ಸಚಿವ ಆರ್.ಅಶೋಕ ಉದ್ಘಾಟಿಸುವರು, ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಮುಜರಾಯಿ, ಹಜ್ ಮತ್ತು ಪಕ್ವ್ ಸಚಿವೆ ಶಶಿಕಲಾ ಜೊಲ್ಲೆ ಮತ್ತು ವಿಷೇಶ ಆಮಂತ್ರಿತರಾಗಿ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಜಿಲ್ಲೆಯ ಸಂಸದರು, ಶಾಸಕರು, ವಿವಿಧ ನಿಗಮದ ಅಧ್ಯಕ್ಷರು ಹಾಗೂ ಅಧಿಕಾರಿಗಳು ಭಾಗವಹಿಸುವರು.


Spread the love

About inmudalgi

Check Also

ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಜ್ಞಾನ ಸ್ಪೂರ್ತಿ ತುಂಬುತ್ತದೆ. ಡಾ. ಸುಬ್ರಾವ ಎಂಟೆತ್ತಿನವರ.

Spread the love ಮೂಡಲಗಿ : ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಸ್ಪೂರ್ತಿ ಆಶ್ರಯ ಹಾಗೂ ಖ್ಯಾತಿಯನ್ನು ತಂದುಕೊಡುತ್ತದೆ ಶಿಕ್ಷಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ