ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಆಯ್ಕೆಯ ಪರಕ್ರೀಯೆ ಉದ್ಘಾಟನೆ
ಕ್ರೀಡಾಪಟ್ಟುಗಳು ಗುರಿ ತಲುಪಲ್ಲು ನಿರಂತರ ಪ್ರಯತ್ನ, ಪರಿಶ್ರಮದಿಂದ ಸಾಧ್ಯ-ಪಿಎಸ್‍ಐ ಬಾಲದಂಡಿ
ಮೂಡಲಗಿ: ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಲ್ಲು ಕ್ರೀಡಾಪಟ್ಟುಗಳು ಗುರಿ ತಲುಪಲ್ಲು ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಮೂಡಲಗಿ ಪೊಲೀಸ್ ಠಾಣೆಯ ಪಿಎಸ್‍ಐ ಹಾಲಪ್ಪ ಬಾಲದಂಡಿ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರದಲ್ಲಿ ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ತಾಲೂಕಾ ಮಟ್ಟದ 2023-24ನೇ ಸಾಲಿನ ಕ್ರೀಡಾ ಶಾಲೆ ಮತ್ತು ಕ್ರೀಡಾ ವಸತಿ ನಿಲಯಗಳಿಗೆ ಆಯ್ಕೆಯ ಪರಕ್ರೀಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡಾ ಪಟ್ಟುಗಳಿಗೆ ಇಂದಿನ ದಿನಮಾನಗಳಲ್ಲಿ ಸರಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೋಡುತ್ತಿದೆ, ಸರಕಾರದ ಸೌಲಭ್ಯ ಮತ್ತು ತಮ್ಮ ಪ್ರತಿಭೆಗಳನ್ನು ಪ್ರದರ್ಶಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಈ ಭಾಗದ ಕೀರ್ತಿಯನ್ನು ಹೆಚ್ಚಿಸಬೇಕೆಂದರು.
ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೋಳುವ ಪ್ರತಿಯೋಬ್ಬ ಕ್ರೀಡಾಪಟ್ಟುಗಳು ಅನುಭವಿ ತರಬೇತಿದಾರಿಂದ ತರಬೇತಿ ಪಡೆದುಕೊಂಡು ಕ್ರೀಡಾ ಶಾಲೆಗೆ ಆಯ್ಕೆಗೊಂಡರೆ ಉತ್ತಮ ಕ್ರೀಡಾಪಟ್ಟು ಆಗುವುದರ ಜೋತೆ ತಮ್ಮ ಜೀವನ ಉಜಲ್ವವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಯುವ ಸಂಘಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ಕ್ರೀಡಾಪಟ್ಟುಗಳು ಉನ್ನತಸ್ಥಾನ ಅಲಂಕರಿಸಲು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಡುಗೆ ಅಪಾರವಾಗಿದೆ. ಕ್ರೀಡೆ ಹಾಗೂ ಜನಪದ ಕಲೆಯ ಸಂಘಟನೆ ಜಿಲ್ಲೆಯಾದೆಂತಹ ಮಾಡುತ್ತೆವೆ ಎಂದರು.
ಬೆಳಗಾವಿ ಕ್ರೀಡಾ ಇಲಾಖೆಯ ಜೋಡೊ ತರಬೇತಿದಾರ ಕುತುಜಾ ಮುಲ್ತಾನಿ ಅವರು ಕ್ರೀಡಾ ಶಾಲೆಗೆ ಆಯ್ಕೆಯ ಪ್ರಕ್ರೀಯೆನ್ನು ವಿವರಿಸಿದರು.
ಸಮಾರಂಭದ ವೇದಿಕೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ವೆಂಕಟೇಶ ಸೋನವಾಲ್ಕರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ, ಉಪನ್ಯಾಸಕ ಪ್ರೊ.ಸಂಗಮೇಶ ಗುಜಗುಂಡ, ಎಸ್.ಎಸ್.ಆರ್ ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೆ.ಎಸ್.ಹೊಸಟ್ಟಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಸಿದ್ದಪ್ಪ ಹೊಸಮನಿ, ಜಗದೀಶ ಡೊಳ್ಳಿ ಮತ್ತಿತರರು ಇದ್ದರು.
ಆಯ್ಕೆಯ ಪ್ರಕ್ರೀಯೆಯಲ್ಲಿ ಭಾಗವಹಿಸಿದ ತಾಲೂಕಿನ 230 ಕ್ರೀಡಾಪಟ್ಟುಗಳಲ್ಲಿ 35 ಕ್ರೀಡಾಪಟ್ಟುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡರು.