ಮುಗಳಖೋಡ: ಇಡೀ ವಿಶ್ವವನ್ನೇ ತಲ್ಲಣಗೋಳಿಸಿರುವ ಮಹಾಮಾರಣಾಂತಿಕ ಕಾಯಿಲೆ ಕರೋನ ವೈರಸ್ ಇಂದು ಇಡೀ ವಿಶ್ವದಲ್ಲಿ ಹಲವಾರು ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದವು ಇದರ ಜೊತೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಆಗಿರುವದರಿಂದ ಸರ್ಕಾರದ ನಿಯಮದಂತೆ ಧಾರ್ಮಿಕ ಸಭೆ, ಸಮಾರಂಭಗಳು ಮತ್ತು ದೇವಾಲಯಗಳ ಬಾಗಿಲುಹಾಕಿ ಧರುಷಣ ನಿರ್ಭಂದಿಸಲಾಗಿತ್ತು.
ಇಂದು ಸರ್ಕಾರದ ಆದೇಶದೊಂದಿಗೆ ಮುಕ್ತಿಮಂದಿರ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದ ಬಾಗಿಲು ತೆಗೆದು ಭಕ್ತರಿಗೆ ಧರುಷಣ ಭಾಗ್ಯ ಸೋಮವಾರದಿಂದ ಕಲ್ಪಿಸಲಾಗುವದು.
ಮಠಕ್ಕೆ ಬರುವ ಭಕ್ತರು ಸಾಮಾಜಿಕ ಅಂತರದೊoದಿಗೆ ಮಾಸ್ಕ್ ಧರಿಸಿ ಆಗಮಿಸಬೇಕು ಮತ್ತು ಮಠದಲ್ಲಿ ತೀರ್ಥ ಹಾಗೂ ಪ್ರಸಾದದ ವ್ಯೆವಸ್ಥೆ ಇರುವುದಿಲ್ಲ ಎಂದು ಶ್ರೀ ಮುಗಳಖೋಡ ಜೀಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ