Breaking News
Home / Recent Posts / ಶತಮಾನದ ಮಹಾನ್ ಸಂತ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಶತಮಾನದ ಮಹಾನ್ ಸಂತ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

Spread the love

ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ ನಿಧನರಾದ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ನಮ್ಮ ಶ್ರೀ ಗಳ ನಿಧನದಿಂದ ಇಡೀ ನಾಡೇ ಶೋಕ ಸಾಗರದಲ್ಲಿ ಮುಳುಗಿದೆ. ಅತ್ಯಂತ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ದೇಶವಲ್ಲದೇ ಜಾಗತೀಕವಾಗಿಯೂ ಹಲವಾರು ರಾಷ್ಟಗಳಲ್ಲಿ ಪ್ರವಚನಗಳನ್ನು ನೀಡಿದ್ದರು. ಕನ್ನಡವಲ್ಲದೇ ಇಂಗ್ಲಿಷ್ ಭಾಷೆಯಲ್ಲಿಯೂ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಇವರೊಬ್ಬ ಈ ಶತಮಾನದ ಮಹಾನ್ ಸಂತ. ಕನ್ನಡ ನಾಡು ಕಂಡ ಅತೀ ಶ್ರೇಷ್ಠ ವಾಗ್ಮೀ. ತುಮಕೂರು ಸಿದ್ಧಗಂಗಾಮಠದ ಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. ಶಿವಕುಮಾರ್ ಸ್ವಾಮೀಜಿಗಳಂತೆಯೇ ನಮ್ಮ ಹೆಮ್ಮೆಯ ಉ.ಕ ಭಾಗದಲ್ಲಿ ನಡೆದಾಡುವ ದೇವರು. ಶ್ರೀ ಗಳ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ನೀಡಲಿ. ಲಕ್ಷಾಂತರ ಭಕ್ತರ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ.
*ಬಾಲಚಂದ್ರ ಜಾರಕಿಹೊಳಿ.*
ಶಾಸಕರು, ಕೆಎಂಎಫ್
ಅಧ್ಯಕ್ಷರು


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ